

ಬೆಂಗಳೂರು: ದಸರಾ ಹಾಗೂ ದೀಪಾವಳಿ ಪ್ರಯುಕ್ತ ದಿ ತಮಿಳುನಾಡು ಹ್ಯಾಂಡ್ಲೂಮ್ ವೀವೆರ್ಸ್ ಕೋ-ಆಪರೇಟಿವ್ ಸೊಸೈಟಿ, ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿದರೆ ಶೇ.30ರವರೆಗೆ ರಿಯಾಯಿತಿ ನೀಡಲಿದೆ.
ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಜಯನಗರ, ಮಂಗಳೂರು ಮತ್ತು ಮೈಸೂರಿನ ಕೋ-ಆಪ್ಟೆಕ್ಸ್ ಮಳಿಗೆಗಳಲ್ಲಿ 2026ರ ಜ.31ರವರೆಗೆ ಈ ಕೊಡುಗೆ ದೊರೆಯಲಿದೆ. ದೇಶಾದ್ಯಂತ 150ಕ್ಕೂ ಅಧಿಕ ಮಳಿಗೆ ಹೊಂದಿರುವ ಕೋ-ಆಪ್ಟೆಕ್ಸ್ ಗುಣಮಟ್ಟ ಉತ್ಪನ್ನಕ್ಕೆ ಹೆಸರುವಾಸಿಯಾಗಿದೆ.
ಸಿಲ್ಕ್ ಸೀರೆ, ಕೊಯಮತ್ತೂರ್ ಸಿಲ್ಕ್, ಕಾಟನ್ ಸ್ಯಾರಿ, ಕೋರಾ ಕಾಟನ್ ಸ್ಯಾರಿ, ವಧು-ವರ ಉಡುಪು, ಶರ್ಟ್ಸ್, ಬೆಡ್ಶಿಟ್ಸ್, ಕಾರ್ಪೆಟ್ಸ್, ಟವಲ್ಸ್, ಕುರ್ತಾ ಮತ್ತು ಚೂಡಿದಾರ ಸೇರಿ 50ಕ್ಕೂ ಅಧಿಕ ಕೈಮಗ್ಗ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆ ದೊರೆಯಲಿದೆ.ನೆರೆಯ ತಮಿಳುನಾಡಿನಲ್ಲಿ ಮನೆಮಾತಾಗಿರುವ ಈ ಸೊಸೈಟಿಯನ್ನು 1935ರಲ್ಲಿ ಸ್ಥಾಪಿಸಲಾಯಿತು. ಕೈಮಗ್ಗ ಕ್ಷೇತ್ರಕ್ಕೆ, ನೇಕಾರರ ಸಮುದಾಯದ ಕಲ್ಯಾಣಕ್ಕೆ ದುಡಿಯುತ್ತಿದೆ. ಮಾರುಕಟ್ಟೆಯ ಅಗತ್ಯ, ಅಭಿರುಚಿಗೆ ಅನುಗುಣವಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ದೇಶಾದ್ಯಂತ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುತ್ತಿದೆ. ಒಂದೇ ಸೂರಿನಡಿ ಕೈಗೆಟುಕುವ ದರದಲ್ಲಿ ಉತ್ಪನ್ನಗಳು ದೊರೆಯಲಿವೆ.
ಸೀರೆಗಳ ಸಂಗ್ರಹ:
ನೇಕರಾರರು ತಯಾರಿಸಿದ ಸೀರೆಗಳ ಸಂಗ್ರಹವೇ ನೋಡುಗರ ಗಮನ ಸೆಳೆಯುತ್ತಿದೆ. ಶುದ್ಧ ರೇಷ್ಮೆಯಿಂದ ತಯಾರಿಸಲಾದ ಕಾಟನ್, ಲೆನಿನ್, ಆರ್ಟ್ ಸಿಲ್ಕ್ ಸೀರೆಗಳು, ಕೇರಳ ಸ್ಯಾರಿ, ಸಿಲ್ಕ್ ಕಾಟನ್ ಸ್ಯಾರಿ ಸೇರಿ 50ಕ್ಕೂ ಅಧಿಕ ಸೀರೆಗಳು ಒಂದೇ ಸೂರಿನಡಿ ದೊರೆಯಲಿವೆ. ‘ಕೋ-ಆಪ್ಟೆಕ್ಸ್ ಮಂಥ್ಲಿ ಸೇವಿಂಗ್ ಸ್ಕೀಂ’ ಅಡಿ ಗ್ರಾಹಕರಿಗೆ ಶೇ.58ರಷ್ಟು ಹೆಚ್ಚುವರಿ ಲಾಭ ಪಡೆಯಬಹುದು. 300 ರೂ.ನಿಂದ ಉಳಿತಾಯ ಯೋಜನೆ ಆರಂಭವಾಗಲಿದೆ.
‘ಕೋ-ಆಪ್ಟೆಕ್ಸ್’ ಮಳಿಗೆಗಳಲ್ಲಿ ಉತ್ಕಷ್ಟ ಉತ್ಪನ್ನಗಳಿವೆ. ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಖರೀದಿಸಬಹುದು. ಗ್ರಾಹಕರು ರಿಯಾಯಿತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು.
-ಎನ್. ಸುಂದರ್ರಾಜನ್, ಪ್ರಾದೇಶಿಕ ವ್ಯವಸ್ಥಾಪಕ.
ತಮಿಳುನಾಡು ಹ್ಯಾಂಡ್ಲೂಮ್ ವೀವೆರ್ಸ್ ಕೋ-ಆಪರೇಟಿವ್ ಸೊಸೈಟಿ-ಬೆಂಗಳೂರು.