2025ರಲ್ಲಿ ಈ 3 ರಾಶಿಯವರು ಭಾರಿ ಹಣದ ನಷ್ಟ ಎದುರಿಸಲಿದ್ದಾರೆ! ನೀವೂ ಈ ರಾಶಿಯವರಾಗಿದ್ರೆ ಎಚ್ಚರ ವಹಿಸಿ | Money Problems

Money Problems
Published on

Money Problems : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಕೇವಲ ಒಂದು ತಿಂಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. 2025ರಲ್ಲಿ ಶನಿ, ಗುರು, ಶುಕ್ರ ಮತ್ತು ಮಂಗಳದಂತಹ ಗ್ರಹಗಳ ಚಲನೆಯಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳು ಭಾರಿ ಆರ್ಥಿಕ ನಷ್ಟವನ್ನು ಎದುರಿಸಲಿವೆಯಂತೆ. ಹೀಗಾಗಿ ಈ ರಾಶಿಚಕ್ರದ ಚಿಹ್ನೆಗಳು ತುಂಬಾ ಜಾಗರೂಕರಾಗಿರಬೇಕು.

ಈ ಪೋಸ್ಟ್‌ನಲ್ಲಿ ಹಣಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಸಿಲುಕುವ ರಾಶಿಚಕ್ರ ಚಿಹ್ನೆಗಳನ್ನು ನಾವು ನೋಡಬಹುದು.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿದವರಿಗೆ 2025 ಕೆಲವು ಆರ್ಥಿಕ ಹಿನ್ನಡೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಹೀಗಾಗಿ, ಈ ರಾಶಿಯವರು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹಿಂದಿನ ಸಮಸ್ಯೆಗಳು ಈ ವರ್ಷವೂ ಮುಂದುವರಿಯುವ ಸಾಧ್ಯತೆ ಇದೆ. ಉದ್ಯಮ ಮತ್ತು ವ್ಯವಹಾರದಲ್ಲಿ ಕುಸಿತ ಮತ್ತು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಿರುವುದರಿಂದ ಈ ವರ್ಷವಿಡೀ ಹಣಕಾಸಿನ ವಿಷಯಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.

ಕರ್ಕಾಟಕ ರಾಶಿ

ಈ ರಾಶಿಯವರಿಗು ಕೂಡ 2025ರ ವರ್ಷವು ಹಣಕಾಸಿನ ವಿಚಾರದಲ್ಲಿ ವಿವಿಧ ರೀತಿಯ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಚಕ್ರದ ಚಿಹ್ನೆಗಳು ವರ್ಷದ ಆರಂಭದಲ್ಲೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ಇನ್ನು ಕುಟುಂಬದಿಂದ ಮತ್ತು ಸ್ನೇಹಿತರಿಂದ ನಿರೀಕ್ಷಿತ ಬೆಂಬಲ ದೊರೆಯುವುದಿಲ್ಲ. ಹಣದ ವಿಚಾರದಲ್ಲಿ ವ್ಯವಹರಿಸುವಾಗ ಜಾಗರೂಕತೆ ವಹಿಸುವುದು ಅಗತ್ಯ.

ಧನುಸ್ಸು ರಾಶಿ

2025ರ ವರ್ಷವು ಧನುಸ್ಸು ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದವರಿಗೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುವುದು ವಿವಿಧ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 2024 ರಲ್ಲಿ ಪ್ರಾರಂಭವಾದ ವಿತ್ತೀಯ ಸಮಸ್ಯೆಗಳು 2025 ರಲ್ಲಿ ತೀವ್ರಗೊಳ್ಳುತ್ತವೆ. ಹೀಗಾಗಿ ಹಣವನ್ನು ಖರ್ಚು ಮಾಡುವಲ್ಲಿ ಬಹಳ ಜಾಗರೂಕರಾಗಿರಬೇಕು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net