More

    ಕಾಶ್ಮೀರದಲ್ಲಿ ಭಾರತದ ಮೂವರು ಯೋಧರು ಹುತಾತ್ಮ; ಉಗ್ರರಿಗಾಗಿ ನಡೆಯುತ್ತಿದೆ ತೀವ್ರ ಶೋಧ…

    ಜಮ್ಮು ಮತ್ತು ಕಾಶ್ಮೀರ: ಶುಕ್ರವಾರ (ಆ.04) ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದದ್ದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಆಟಿಕಲ್ 370ಯನ್ನು ರದ್ದು ಮಾಡಿದ 4ನೇ ವಾರ್ಷಿಕೋತ್ಸವದ ಹಿಂದಿನ ದಿನದಂದು.

    ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೇಲ್ಭಾಗದಲ್ಲಿರುವ ಹಲನ್​ ಭಾಗದಲ್ಲಿ ಭಯೋತ್ಪಾದಕರ ಜತೆ ಸೈನಿಕರ ಮುಖಾಮುಖಿ ನಡೆದಿದ್ದು ಈ ಸಂದರ್ಭ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಸಿಬ್ಬಂದಿಗೆ ನಿಖರ ಮಾಹಿತಿ ಲಭಿಸಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಆರಂಭಿಸಿದ್ದು, ತಡರಾತ್ರಿವರೆಗೆ ಶೋಧ ನಡೆದಿದೆ. ತಡರಾತ್ರಿ ಸೇನೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts