ತೆಲಂಗಾಣ: ನಿರ್ಮಾಣ ಹಂತದಲ್ಲಿರುವ ಸ್ಟೇಡಿಯಂನ ಗೋಡೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ರಂಗಾ ರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಗ್ರಾಮದ ಕ್ರೀಡಾಂಗಣ ನಿರ್ಮಾಣ ಹಂತದಲ್ಲಿದೆ. ಈ ವೇಳೆ ಒಳಾಂಗಣ ಕ್ರೀಡಾಂಗಣದ ಗೋಡೆ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. 10 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸ್ಥಳದಲ್ಲಿ ಒಟ್ಟು 20 ಕಾರ್ಮಿಕರು ಇದ್ದರು. ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಿಂದ ಹಲವರನ್ನು ಹೊರತೆಗೆದಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ಅವಶೇಷಗಳನ್ನು ತೆರವುಗೊಳಿಸುತ್ತಿರುವ ದೃಶ್ಯಗಳು ಸ್ಥಳದಿಂದ ಕಂಡುಬಂದಿದೆ.
ವಿದೇಶದಲ್ಲಿ ಮಸಾಲಾ ಟೀ ಸಿಗದೆ ‘ದ ಇಂಡಿಯನ್ ಕಿಚನ್’ ಹೋಟೆಲ್ ತೆರೆದ ಬೆಂಗ್ಳೂರಿನ ಉದ್ಯಮಿ