

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ ಅಧಿಕಾರ ವಹಿಸುತ್ತಿದ್ದಂತೆ ಬೆಂಗಳೂರು ನಗರ ಕಮಿಷನರ್ ಸೇರಿದಂತೆ, ಕೆಲ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಇದೀಗ ಚುನಾವಣೆ ಹಿನ್ನೆಲೆ ವರ್ಗಾವಣೆಯಾಗಿದ್ದ 292 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಬಿ ದಯಾನಂದ ಅವರನ್ನು ಆಯುಕ್ತರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಮೇ 30 ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ಪ್ರತಾಪ್ ರೆಡ್ಡಿ ಅವರು ಆಂತರಿಕ ಭದ್ರತಾ ವಿಭಾದ ಡಿಜಿಪಿಯನ್ನಾಗಿ ಸರ್ಕಾರ ನೇಮಿಸಿದೆ.
ಇದೀಗ ಚುನಾವಣೆ ಹಿನ್ನೆಲೆ ವರ್ಗಾವಣೆಯಾಗಿದ್ದ 292 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಯಾವ ಇನ್ಸ್ಪೆಕ್ಟರ್ ಎಲ್ಲಿಗೆ ವರ್ಗಾವಣಗೊಂಡಿದ್ದಾರೆ ಎಂಬ ಪೂರ್ಣ ಮಾಹಿತಿ ಈ ಕೆಳಗಿನ ಪಟ್ಟಿಯಲ್ಲಿದೆ.