ಬೆಂಗಳೂರು: “ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್’ 2023-24ನೇ ಸಾಲಿನಲ್ಲಿ 28.50 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಬ್ಯಾಂಕ್, ಈ ಕ್ಷೇತ್ರದಲ್ಲಿ 117 ವರ್ಷ ಮೀರಿ ಸೇವೆ ಸಲ್ಲಿಸಿರುವುದು ಗಮನಾರ್ಹ. ಬೆಂಗಳೂರಿನಲ್ಲಿ 20, ಮೈಸೂರು 1, ರಾಮನಗರ 1 ಸೇರಿ ರಾಜ್ಯದಲ್ಲಿ 22 ಶಾಖೆಗಳಿವೆ. ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲಗಳು ಶೂನ್ಯ ಇದೆ. ಬ್ಯಾಂಕಿನ ಒಟ್ಟು ವಹಿವಾಟು 3,429 ಕೋಟಿ ರೂ. ಮೀರಿದೆ. 2023-24ನೇ ಸಾಲಿನಲ್ಲಿ ಆದಾಯ ತೆರಿಗೆ, ಅವಕಾಶಪೂರ್ವ ಸೇರಿ 86.94 ಕೋಟಿ ರೂ. ಲಾಭ ಗಳಿಸಿದೆ. ತೆರಿಗೆ, ಅವಕಾಶ ನಂತರ 28.50 ಕೋಟಿ ರೂ. ನಿವ್ವಳ ಲಾಭ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಆವಲಹಳ್ಳಿ ಆರ್. ಚಂದ್ರಪ್ಪ ಮಾಹಿತಿ ನೀಡಿದರು.
ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ 2,688 ಕೋಟಿ ರೂ. ಇದೆ. 2,096 ಕೋಟಿ ರೂ. ಠೇವಣಿ ಸಂಗ್ರಹಣೆ ಮಾಡಿದ್ದೇವೆ. ಬ್ಯಾಂಕಿನ ಆಪದ್ಧನ ನಿಧಿ ಸೇರಿ ಇತರ ನಿಧಿಗಳು 496 ಕೋಟಿ ರೂ. ಮೀರಿದೆ. 1,333 ಕೋಟಿ ರೂ. ಅಧಿಕ ಸಾಲ ನೀಡಲಾಗಿದೆ. ಬ್ಯಾಂಕಿನ ಷೇರು ಬಂಡವಾಳ 95 ಕೋಟಿ ರೂ. ದಾಟಿದೆ. ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಡಿಕರಣ, ಸಾಲ ನೀಡಿಕೆ ಮತ್ತು ಲಾಭ ಗಳಿಕೆಯಲ್ಲಿ ರಾಜ್ಯದ ಎಲ್ಲ ಪಟ್ಟಣ ಸಹಕಾರ ಬ್ಯಾಂಕ್ಗಳ ಪೈಕಿ ನಮ್ಮ ಬ್ಯಾಂಕ್ ಅಗ್ರಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಎಲ್ಲ ಗ್ರಾಹಕರಿಗೆ, ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.
ನೋಡ ನೋಡುತ್ತಿದ್ದಂತೆ ಮಾವುತನನ್ನು ತುಳಿದು ಸಾಯಿಸಿದ ಆನೆ; ಹೃದಯ ವಿದ್ರಾವಕ ವಿಡಿಯೋ ವೈರಲ್
ಠೇವಣಿ, ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಡಿಕರಣ, ಸಾಲ ನೀಡಿಕೆ ಹಾಗೂ ಲಾಭ ಗಳಿಸುವಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪಿ.ಮಂಜುನಾಥ ಹೇಳಿದರು.