15 ವರ್ಷದ ಹಿಂದೆ ಮದ್ವೆಗೆ ಹೋಗಿದ್ದ ಬಾಲಕಿ ಈಗ ಆತನನ್ನೇ ವಿವಾಹವಾಗಿ 3ನೇ ಹೆಂಡತಿಯಾದಳು!

indonesianwoman
Published on

ಇಂಡೋನೇಷ್ಯಾ: ಕೆಲವು ಜೋಡಿಗಳಿಗೆ ಯಾವುದೇ ಹೊಂದಾಣಿಕೆಯೆ ಇರುವುದಿಲ್ಲ. ಗಂಡ ಎತ್ತರವಾಗಿದ್ದರೆ ಅವನ ಹೆಂಡತಿ ಕುಳ್ಳಗಿರುತ್ತಾಳೆ. ಗಂಡ ಕಪ್ಪಗಿದ್ದರೆ ಹೆಂಡತಿ ಸುಂದರಿ. ಪತಿ ದೊಡ್ಡವನಾಗಿದ್ದರೆ ಅವನ ಹೆಂಡತಿ ಅವನಿಗಿಂತ ಚಿಕ್ಕವಳು. ಆದರೆ ಇಲ್ಲೊಂದು ಜೋಡಿಯ ಪತಿ-ಪತ್ನಿಯರ ನಡುವಿನ ವಯಸ್ಸಿನ ವ್ಯತ್ಯಾಸ ಎಷ್ಟಿತ್ತೆಂದರೆ ಜನ ಇವರನ್ನು ಅಪ್ಪ-ಮಗಳ ಜೋಡಿ ಎಂದೇ ಪರಿಗಣಿಸುತ್ತಾರೆ.

ವಾಸ್ತವವಾಗಿ, ಈ ದಂಪತಿ ವಯಸ್ಸಿನ ವ್ಯತ್ಯಾಸವು 38 ವರ್ಷಗಳು. ಪತಿಗೆ 62 ವರ್ಷವಾದರೆ, ಪತ್ನಿಗೆ 24 ವರ್ಷ. ಆದರೆ, ಇದು ಆ ವ್ಯಕ್ತಿಯ ಮೂರನೇ ಮದುವೆ. ಈತ 24 ವರ್ಷದ ಯುವತಿಯನ್ನು ಮೂರನೇ ಮದುವೆ ಆಗಿದ್ದಾನೆ. ಇಂಡೋನೇಷ್ಯಾದ ಬಂಕಾ ದ್ವೀಪದಿಂದ ಇವರಿಬ್ಬರ ಮದುವೆಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸ್ಟೋರಿ ಕೂಡ ಬೆಳಕಿಗೆ ಬಂದಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ರೆನೆಟಾಗೆ ಮನೆಯಲ್ಲಿ ಒಂದು ಆಲ್ಬಮ್ ಸಿಗುತ್ತದೆ. ಅದನ್ನು ತೆರೆದು ನೋಡಿದಾಗ ನಿಜಕ್ಕೂ ಆಕೆಗೆ ಶಾಕ್​ ಆಗುತ್ತದೆ. 2009 ಈಕೆ ಒಂದು ಮದುವೆಗೆ ಅತಿಥಿಯಾಗಿ ಹೋಗಿದ್ದಳು. ಅದೇ ಮದುವೆಯ ಫೋಟೋ ಈ ಆಲ್ಬಮ್​​ನಲ್ಲಿ ಇತ್ತು. ಈ ಆಲ್ವಮ್​​ ಈಕೆ ಪತಿಯ 2ನೇ ಮದುವೆಯದ್ದಾಗಿತ್ತು. ತಾನು ಯಾರ ಮದುವೆಗೆ ಅತಿಥಿಯಾಗಿ ಹೋಗಿದ್ದೇನೊ ಆ ವ್ಯಕ್ತಿಯನ್ನೇ ಮೂರನೇ ಮದುವೆ ಆಗಿದ್ದೇನೆಂದು ಆಶ್ಚರ್ಯಗೊಂಡಿದ್ದಾಳೆ.

24 ವರ್ಷದ ರೆನಾಟಾ ಫಡೆಯಾ ತನಗಿಂತ 38 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಳು. ಗಂಡನ ಎರಡನೇ ಮದುವೆಗೆ ಅತಿಥಿಯಾಗಿ ಬಂದಿದ್ದಾಳೆ. ಆಗ ಆಕೆಗೆ ಕೇವಲ 9 ವರ್ಷ ವಯಸ್ಸು ಮತ್ತು ಇಂದು ಅದೇ ವ್ಯಕ್ತಿಯ ಮೂರನೇ ಹೆಂಡತಿಯಾಗಿದ್ದಾಳೆ.

ನನ್ನ ಪತಿ 2ನೇ ಮದುವೆಗೆ ನಾನು ಅತಿಥಿಯಾಗಿ ಬಂದಿದ್ದೇನು. ನಂತರ ಹತ್ತು ವರ್ಷಗಳ ನಂತರ, 2019 ರಲ್ಲಿ, ಅವರು ಅದೇ ವ್ಯಕ್ತಿಯನ್ನು ಭೇಟಿಯಾದೆ. ನಂತರ ಇವರ ಪ್ರೀತಿಯಲ್ಲಿ ಬಿದ್ದೇನು. 2020ರಲ್ಲಿ ವಿವಾಹವಾದೆವು. ಸದ್ಯ ಒಂದು ಮಗು ಕೂಡ ಇದೆ. ತನ್ನ ಗಂಡನ ಎರಡನೇ ಮದುವೆಯ ಆಲ್ಬಂ ನೋಡಿದಾಗ ಈ ವಿಷಯ ತನಗೆ ತಿಳಿಯಿತು. ತನ್ನ ಪತಿಗೆ ಮೊದಲ ಮದುವೆಯಿಂದ ಮಗುವಿದೆ. ಎರಡನೇ ಮದುವೆ ಕೇವಲ 2 ವರ್ಷಗಳ ಕಾಲ ನಡೆಯಿತು ಮತ್ತು ಅದರಿಂದ ಅವರಿಗೆ ಮಕ್ಕಳಾಗಲಿಲ್ಲ. ನನ್ನನ್ನು ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಮತ್ತು ಇಬ್ಬರೂ ಸಂತೋಷದ ಜೀವನವನ್ನು ನಡೆಸುತ್ತಿದ್ದೇವೆ ಎಂದು ರೆನಾಟಾ ಹೇಳಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net