22 ದಿನದ ಮಗುವಿಗೆ 65 ಕಡೆ ಬರೆ ಎಳೆದ ಹೆತ್ತವರು; ಕಂದಮ್ಮನ ಸ್ಥಿತಿ ಗಂಭೀರ| infant

baby
Published on

ಅಮರಾವತಿ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಹಸುಗೂಸಿಗೆ (Infant) ಸಂಬಂಧಿಕರ ಮಾತನ್ನು ಕಟ್ಟಿಕೊಂಡು ಪೋಷಕರು ದೇಹದ 65 ಕಡೆ ಕಬ್ಬಿಣದ ಸಲಾಕೆಯಿಂದ ಬರೆ ಎಳೆದಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಕಲ್ದಾರ ತಾಲ್ಲೂಕಿನ ಸೀಮೋರಿ ಗ್ರಾಮದಲ್ಲಿ ನಡೆದಿದೆ. 

ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮರಾವತಿಯ ಡಫರಿನ್ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

baby

ಘಟನೆ ಕುರಿತು ಪ್ರತಿಕ್ರಿಯಿಸಿರುವ ವೈದ್ಯಾಧಿಕಾರಿಯೊಬ್ಬರು, 22 ದಿನದ ಹಿಂದೆ ಜನಿಸಿದ್ದ ಮಗುವು ಹೃದಯ ಸಂಬಂಧಿ ಖಾಯಿಲೆಯಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಮಗುವನ್ನು ನೋಡಲು ಬಂದಿದ್ದ ಸಂಬಂಧಿಕರು ಪೋಷಕರಿಗೆ ಕಬ್ಬಿಣದ ಸಲಾಕೆಯಿಂದ ಬರೆ ಎಳೆದರೆ ಮಗು ಹುಷರಾಗುತ್ತದೆ ಎಂದು ಹೇಳಿದ್ದರು. ಅದರಂತೆ ಕಬ್ಬಿಣದ ಸಲಾಕೆಯಿಂದ ದಂಪತಿಗಳು ಮಗುವಿನ ದೇಹದ 65 ಕಡೆ ಬರೆ ಎಳೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು , ಆರೋಗ್ಯ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ದೂರನ್ನು ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೇರೆಡೆ ಸ್ಥಳಾಂತರಿಸಲು ವೈದ್ಯರು ಸೂಚಿಸಿದ್ದು, ನಾಗ್ಪುರ ಅಥವಾ ಮುಂಬೈಗೆ ಸ್ಥಳಾಂತರಿಸಬಹುದು ಎಂದು ಸ್ಥಳೀಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net