ನಕ್ಸಲ್ ಎನ್‌ಕೌಂಟರ್ ನಡೆದು 21 ವರ್ಷ

thota

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೊದಲ ನಕ್ಸಲ್ ಎನ್‌ಕೌಂಟರ್ ಪ್ರಕರಣ ಕಾರ್ಕಳದ ಈದು ಗ್ರಾಮದಲ್ಲಿ ನಡೆದು ಇಂದಿಗೆ (ನ.17) 21 ವರ್ಷಗಳು. ನಕ್ಸಲ್‌ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿ ಹೊಂದಿರುವ ಈ ಗ್ರಾಮದ ಅಭಿವೃದ್ಧಿ ಬಗ್ಗೆ ಸರ್ಕಾರ ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ.

ಈದು ಗ್ರಾಮದ ಬೊಳ್ಳೆಟ್ಟು ರಾಮಪ್ಪ ಪೂಜಾರಿ ಮನೆಯಲ್ಲಿ ಅಡಗಿದ್ದ ಐವರು ಶಸ್ತ್ರಸಜ್ಜಿತ ನಕ್ಸಲ್ ತಂಡ 2003ರ ನವೆಂಬರ್ 16ರ ರಾತ್ರಿ ಅವರ ಮನೆಗೆ ಬಂದಿತ್ತು. ನ.16ರ ರಾತ್ರಿ ಊಟ ಮುಗಿಸಿದ ನಕ್ಸಲರು ಮನೆಯ ಚಾವಡಿಯಲ್ಲಿ ನಾಲ್ವರೂ ಮಲಗಿದ್ದರು. ಮನೆಯ ಹೊರಗೆ ಓರ್ವ ನಕ್ಸಲ್ ಸರತಿಯಂತೆ ಗಂಟೆಗೊಮ್ಮೆ ಒಬ್ಬರು ಗಸ್ತು ತಿರುಗುತ್ತಿದ್ದರು. ನಕ್ಸಲರ ಚಲನವಲನಗಳ ಮಾಹಿತಿಯಿದ್ದ ಪೊಲೀಸರ ತಂಡ ಉಡುಪಿ ಎಸ್ಪಿಯಾಗಿದ್ದ ಮುರುಗನ್ ನೇತೃತ್ವದಲ್ಲಿ ನ.17ರ ಮುಂಜಾನೆ ನಾಲ್ಕು ಗಂಟೆಗೆ ಮನೆ ಎದುರು ನೆಟ್ಟಿದ್ದ ಹುಲ್ಲು ರಾಶಿಯ ಒಳಗಿನಿಂದ ಗಸ್ತು ತಿರುಗುತಿದ್ದ ನಕ್ಸಲ್ ಪಾರ್ವತಿಯ ಕುತ್ತಿಗೆಗೆ ಬಂದೂಕಿನಿಂದ ಗುಂಡು ಹಾರಿಸಿತ್ತು. ನಕ್ಸಲ್ ಪಾರ್ವತಿ ಗಾಯಗೊಂಡು ಚಾವಡಿಯಲ್ಲಿ ಮಲಗಿದ್ದ ನಾಲ್ವರನ್ನು ಓಡುವಂತೆ ಸೂಚಿಸಿ ಸಾವಿಗೀಡಾಗಿದ್ದಳು. ಮನೆಯೊಳಗಿನ ಲೈಟ್ ಹಾಕುತ್ತಿದ್ದಂತೆ ನಕ್ಸಲ್ ಆನಂದ ಹಾಗೂ ವೇಣು ಮನೆಯ ಹಿಂಬಾಗಿಲಿನಿಂದ ಕಾಡಿನತ್ತ ಓಡಿದ್ದರು. ಒಳಗಿದ್ದ ನಕ್ಸಲ್ ಹಾಜೀಮಾ ಪೊಲೀಸರ ಗುಂಡೇಟಿಗೆ ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಅಡಗಿ ಕುಳಿತಿದ್ದ ನಕ್ಸಲ್ ಯಶೋದಾ ಗುಂಡು ತಗುಲಿ ಮನೆಯ ಮೇಲ್ಭಾಗದಲ್ಲಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಳು. ಈ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಭರವಸೆಯಲ್ಲೇ ಉಳಿದ ಪ್ರಗತಿ

ಎನ್‌ಕೌಂಟರ್ ನಡೆದ ಬಳಿಕ ಘಟನಾ ಸ್ಥಳಕ್ಕೆ ಅನೇಕ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಈ ಗ್ರಾಮದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಮೂಲಸೌಕರ್ಯಗಳಾದ ರಸ್ತೆ, ನೀರು, ಸೇತುವೆ ಸಹಿತ ಇತರ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ ಸಹಿತ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಕೂಡ ಬೊಳ್ಳೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಹೋಗಿದ್ದು, ಅವರು ನೀಡಿದ್ದ ಭರವಸೆ 21 ವರ್ಷಗಳು ಕಳೆದರೂ ಭರವಸೆಯಾಗಿಯೇ ಉಳಿದುಕೊಂಡಿವೆ.

ಮತ್ತೊಮ್ಮೆ ಸದ್ದು

ನಕ್ಸಲ್ ಎನ್‌ಕೌಂಟರ್ ನಡೆದು 21ವರ್ಷಗಳು ಕಳೆದು ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಕಾಡು ಪ್ರದೇಶದಲ್ಲಿ ನಾಲ್ವರು ನಕ್ಸಲರು ಕಂಡುಬಂದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದಂತೆ ಪೊಲೀಸರು ಹಾಗೂ ನಕ್ಸಲ್ ನಿಗ್ರಹದಳ ಕೂಂಬಿಂಗ್ ನಡೆಸಿದ್ದಾರೆ. ಯಾವುದೇ ಕುರುಹು ಪತ್ತೆಯಾಗಿಲ್ಲ. ಈ ಪ್ರಕರಣದ ಬೆನ್ನಲ್ಲೆ ಕೆಲವೇ ದಿನಗಳ ಅಂತರದಲ್ಲಿ ಮಲೆನಾಡು ಭಾಗದಲ್ಲಿ ಶಂಕಿತ ನಕ್ಸಲರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 21ವರ್ಷಗಳಲ್ಲಿ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಚುರುಕುಗೊಂಡಿರುವ ಬಗ್ಗೆ ಎಲ್ಲೆಡೆ ಸಂದೇಹಗಳು ವ್ಯಕ್ತವಾಗುತ್ತಿವೆ.

ಎನ್‌ಕೌಂಟರ್ ಘಟನೆ ನಡೆದು ಇಂದಿಗೆ 21 ವರ್ಷಗಳು ಕಳೆಯುತ್ತಿವೆ. ಆದರೆ ಬೊಳ್ಳೆಟ್ಟು ಪ್ರದೇಶವು ಇಷ್ಟು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಇನ್ನಾದರೂ ಅಭಿವೃದ್ಧಿಯಾಗಲಿ ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಾಗಿದೆ.
-ಪ್ರಶಾಂತ್ ಪೂಜಾರಿ ಬೊಳ್ಳೆಟ್ಟು ಗ್ರಾಮಸ್ಥ

ಸರ್ಕಾರಿ ಸೇವೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪ್ಯಾಕೇಜ್ ನೀಡಲು ಆದ್ಯತೆ ನೀಡಲಾಗುವುದು. ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.
-ಡಾ.ವಿದ್ಯಾಕುಮಾರಿ ಉಡುಪಿ ಜಿಲ್ಲಾಧಿಕಾರಿ

ಕ್ರೀಡೆಗಳಿಂದ ಆರೋಗ್ಯ, ಸೃಜನಶೀಲತೆ ವೃದ್ಧಿ

ರೈತರ ಸಮಸ್ಯೆಗಳಿಗೆ ಸಾಹಿತ್ಯಿಕ ಬೆಂಬಲ

 

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…