More

    ಅಪ್ರಾಪ್ತ ಬಾಲಕಿ ಅತ್ಯಾಚಾರಗೈದ ಅಪರಾಧಿಗೆ 20 ವರ್ಷ ಶಿಕ್ಷೆ

    ಉಡುಪಿ: ಅರೆನಗ್ನ ಚಿತ್ರ ವಿಡಿಯೋ ಚಿತ್ರೀಕರಣ ಮಾಡಿ ಬೆದರಿಸಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೊಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

    ಕಾಪು ಮಜೂರು ನಿವಾಸಿ ಶಂಶುದ್ದೀನ್​(24) ಶಿಕ್ಷೆಗೆ ಒಳಗಾದವನು. ಪ್ರಕರಣದಲ್ಲಿ ಒಟ್ಟು 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ ಮತ್ತು ಮೊಬೈಲ್​ಗಳಲ್ಲಿದ್ದ ಭಾವಚಿತ್ರದ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಕಾರಣ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ 20 ವರ್ಷ ಕಠಿಣ ಸಜೆ 20 ಸಾವಿರ ರೂ. ದಂಡ, ಬೆದರಿಕೆಯೊಡ್ಡಿದಕ್ಕೆ ಒಂದು ವರ್ಷ ಸಾದಾ ಸಜೆ ಒಂದು ಸಾವಿರ ರೂ. ದಂಡ, ಲೈಂಗಿಕ ಹಲ್ಲೆಗಾಗಿ ಒಂದು ವರ್ಷ ಸಾದಾ ಸಜೆ ಮತ್ತು ಒಂದು ಸಾವಿರ ರೂ. ದಂಡ, ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕೆ 5 ವರ್ಷ ಸಾದಾ ಸಜೆ, 5000 ರೂ. ದಂಡ, ವಿಡಿಯೋವನ್ನು ಮೊಬೈಲ್​ನಲ್ಲಿ ಸಂಗ್ರಹಿಸಿ ಇಟ್ಟಿದ್ದಕ್ಕೆ 5000 ರೂ. ದಂಡ, ಐಟಿ ಕಾಯಿದೆಯಡಿ 2 ವರ್ಷ ಸಾದಾ ಸಜೆ 2000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಒಟ್ಟು 62 ಸಾವಿರ ರೂ. ದಂಡದಲ್ಲಿ 50 ಸಾವಿರ ರೂ. ಬಾಲಕಿಗೆ, ಉಳಿದ 12ಸಾವಿರ ರೂ. ಸರ್ಕಾರಕ್ಕೆ ಪಾವತಿಸುವಂತೆ ಮತ್ತು ನೊಂದ ಬಾಲಕಿಗೆ ಸರ್ಕಾರದಿಂದ ಒಂದು ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

    ಘಟನೆ ವಿವರ
    ಶಂಶುದ್ದೀನ್ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಬಿಡುತ್ತಿದ್ದು, ಆತ ತನ್ನ ಮೊಬೈಲ್​ನಲ್ಲಿ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ ತೆಗೆದು ಫೋಟೋವನ್ನು ಬೇರೆಯವರಿಗೆ ಕಳುಹಿಸಿ ವೈರಲ್​ ಮಾಡುವುದಾಗಿ ಹೆದರಿಸಿ ನನ್ನ ಜೊತೆ ಬಂದಲ್ಲಿ ಫೋಟೋ ಡಿಲೀಟ್​ ಮಾಡುವುದಾಗಿ ನಂಬಿಸಿದ್ದ. ನೊಂದ ಬಾಲಕಿಯನ್ನು ಕಾಪುವಿನ ಲಾಡ್ಜ್​ಗೆ ಕರೆದುಕೊಂಡು ಹೋಗಿ ತನ್ನ ಹೆಂಡತಿ ಎಂದು ಸುಳ್ಳು ಮಾಹಿತಿ ನೀಡಿ ರೂಮ್​ ಪಡೆದು ಅತ್ಯಾಚಾರ ಎಸಗಿದ್ದ. ಅದೇ ಸಮಯ ಆರೋಪಿ ನೊಂದ ಬಾಲಕಿಯ ಅರೆ ನಗ್ನ ಭಾವಚಿತ್ರಗಳನ್ನು ತೆಗೆದು ವಿಡಿಯೋ ಮಾಡಿದ್ದ. ನಂತರ ಡಿಲೀಟ್​ ಮಾಡ ಬೇಕಾದರೆ ಹಣ ನೀಡಬೇಕೆಂದು ಬೆದರಿಕೆ ಹಾಕಿ ಆಕೆಯಿಂದ ಹಣ ಪಡೆದುಕೊಂಡಿದ್ದ. 2ನೇ ಬಾರಿ ಕಾಪುವಿನ ರೆಸಾರ್ಟ್​ಗೆ ಕರೆದು ಕೊಂಡು ಹೋಗಿ ಬಾಲಕಿಗೆ ದೌರ್ಜನ್ಯ ಎಸಗಿದ್ದ. ಆರೋಪಿ ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಆಕೆಯ ಅರೆನಗ್ನ ಭಾವಚಿತ್ರಗಳನ್ನು ತಾಯಿಯ ಮೊಬೈಲ್​ಗೆ ಕಳುಹಿಸಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts