

Dark Spots: ಹೆಚ್ಚಿನ ಜನರು ತಮ್ಮ ದೇಹದ ಆರೋಗ್ಯಕ್ಕಿಂತ ಮುಖದ ಆರೋಗ್ಯ, ಸೌಂದರ್ಯದ ಬಗ್ಗೆ ಅತೀಯಾದ ಕಾಳಜಿ ವಹಿಸುತ್ತಾರೆ. ತಮ್ಮ ಮುಖದ ಮೇಲೆ ಒಂದು ಸಣ್ಣ ಗುಳ್ಳೆ ಅಥವಾ ಕಲೆ ಕಂಡುಬಂದರೂ ಚಿಂತಾಕ್ರಾಂತರಾಗುತ್ತಾರೆ. ಅದರ ಬಗ್ಗೆಯೇ ಇಡೀ ದಿನವೆಲ್ಲಾ ಯೋಚನೆ ಮಾಡುತ್ತ, ಯಾವ ಕ್ರೀಮ್ ಬಳಸಿದರೆ ಹೋಗುತ್ತದೆ, ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಹೊಸ ಪ್ರಾಡೆಕ್ಟ್ ಲಭ್ಯವಿದೆ ಎಂದೆಲ್ಲಾ ತಲೆಕಡಿಸಿಕೊಳ್ಳುತ್ತಾರೆ.
ಹೆಚ್ಚಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ ಸೌಂದರ್ಯ ವರ್ಧಕ ಪ್ರಾಡೆಕ್ಟ್ಗಳನ್ನು ಬಳಸುವ ಮೂಲಕ ತಮ್ಮ ಮುಖದ ಕಾಂತಿ, ತ್ವಚೆಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದರಲ್ಲೂ ಅತೀ ಮುಖ್ಯವಾಗಿ ಮುಖದಲ್ಲಿನ ಕಪ್ಪು ಕಲೆಯ ಸಮಸ್ಯೆಯಿಂದ ಬಳಲುವವರು ಇದನ್ನು ಹೋಗಲಾಡಿಸುವುದು ಹೇಗೆ? ಇದರಿಂದ ಮುಕ್ತಿ ಪಡೆಯುವುದು ಹೇಗೆಂದು ಚಿಂತೆ ಮಾಡುತ್ತಾರೆ.
ಮುಖದಲ್ಲಿನ ಕಪ್ಪು ಕಲೆಗೆ ಮನೆಯಲ್ಲಿ ಬಳಸುವ ಸೌತೆಕಾಯಿ ಮತ್ತು ಆಲೂಗಡ್ಡೆಯೇ ಚಮತ್ಕಾರಿ ಔಷಧ. ಈ ಎರಡು ತರಕಾರಿ ಸಾಕು, ಕಪ್ಪು ಕಲೆಗಳನ್ನು ಹೋಗಲಾಡಿಸಲು. ನಿಮ್ಮ ಮನೆಯಲ್ಲಿಯೇ ಈ ಸರಳ, ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಡಾರ್ಕ್ ಸ್ಪಾರ್ಟ್ಗೆ ಗುಡ್ಬೈ ಹೇಳಬಹುದು.
ಟೇಬಲ್ಸ್ಪೂನ್ ಸೌತೆಕಾಯಿ ರಸ ಮತ್ತು 1 ಟೇಬಲ್ಸ್ಪೂನ್ ಆಲೂಗಡ್ಡೆಯನ್ನು ಸರಿಯಾಗಿ ಮಿಶ್ರಿಸಿ, ಈ ಪ್ಯಾಕ್ ಅನ್ನು ಕಪ್ಪು ಕಲೆಯ ಮೇಲೆ ಹಚ್ಚಿ. ಹೀಗೆ ನಿರಂತರವಾಗಿ ಮಾಡಿ. ಇದು ನಿಮ್ಮ ಮುಖವನ್ನು ತೇವಗೊಳಿಸುವುದರ ಜತೆಗೆ ಡಾರ್ಕ್ ಸ್ಪಾಟ್ಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.