

ಗುವಾಹಟಿ: ಮನ ಕಲುಕುವ ಘಟನೆ ಒಂದರಲ್ಲಿ ಆನೆಗಳೆರಡು ತನ್ನ ಸತ್ತ ಕಂದಮ್ಮನನ್ನು ಬದುಕಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೋವನ್ನು IFS ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದು, ತನ್ನ ಮಗು ಸತ್ತಿದ್ದರೂ ಛಲ ಬಿಡದೆ ಅದರ ಮೃತದೇಹವನ್ನು ಎರಡು ಕಿಲೋಮೀಟರ್ ಹೊತ್ತುಕೊಂಡು ಹೋಗಿ ಬದುಕಿಸಲು ಪ್ರಯತ್ನಿಸುತ್ತದೆ ಎಂದು ಬರೆದುಕೊಂಡಿದ್ಧಾರೆ.
ಅಸ್ಸಾಂನ ಗೋರೇಶ್ವರ ಎಂಬ ಪ್ರದೇಶದಲ್ಲಿ ತಾಯಿ ಆನೆಯೂ ಸತ್ತ ತನ್ನ ಮಗುವನ್ನು ಬದುಕಿಸಲು ಅದರ ಮೃತದೇಹವನ್ನು ಸುಮಾರು ಎರಡೂವರೆ ಕಿಲೋಮೀಟರ್ ದೂರ ಹೊತ್ತುಕೊಂಡು ಬರುತ್ತದೆ. ಬಳಿಕ ಅದರ ಮೇಲೆ ನೀರನ್ನು ಸಿಂಪಡಿಸಿ ಬದುಕಿಸಲು ಇನ್ನಿಲ್ಲದ ಕಸರತ್ತನ್ನು ಮಾಡುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಬಳಿಕ ತನ್ನ ಕಂದಮ್ಮ ಬದುಕಿಲ್ಲ ಎಂಬ ವಿಚಾರವನ್ನು ತಿಳಿದು ಆನೆ ಜೋರಾಗಿ ಗೀಳಿಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆನೆ ಮರಿಯೂ ತನ್ನ ಹಿಂಡಿನಿಂದ ಮೂರು ದಿನಗಳ ಹಿಂದೆ ಬೇರ್ಪಟ್ಟ ಬಳಿಕ ಮೃತಪಟ್ಟಿತ್ತು ಎಂದು ವರದಿಯಾಗಿದೆ.