ಹುಲಿ ದಾಳಿಗೆ 2 ಆಕಳು ಬಲಿ

TIGER ATTACK
Published on

ಯಲ್ಲಾಪುರ: ಮೇಯಲು ಹೋದ ಎರಡು ಆಕಳುಗಳನ್ನು ಹುಲಿ ದಾಳಿ ಮಾಡಿ ಬಲಿ ಪಡೆದ ಘಟನೆ ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ಹುತ್ಕಂಡದ ಕುಂಟೆಜಡ್ಡಿಯಲ್ಲಿ ನಡೆದಿದೆ. ಕುಂಟೆಜಡ್ಡಿಯ ನರಸಿಂಹ ಭಟ್ಟ ಇವರಿಗೆ ಸೇರಿದ ಎರಡು ಆಕಳುಗಳು ಮೇಯಲು ಬೇಣಕ್ಕೆ ಹೋದಾಗ ಹುಲಿ ದಾಳಿ ಮಾಡಿದೆ. ರಕ್ಷಿಸಿಕೊಳ್ಳಲು ಆಕಳುಗಳು ಕೊಟ್ಟಿಗೆಯತ್ತ ಓಡಿ ಬಂದಿದ್ದು, ಅಟ್ಟಿಸಿಕೊಂಡು ಬಂದ ಹುಲಿ ಎರಡೂ ಆಕಳುಗಳನ್ನು ಕೊಂದಿದೆ.

ಪಶುವೈದ್ಯರು ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹುಲಿ ದಾಳಿಯಿಂದ ಆಕಳುಗಳು ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡಬೇಕು. ಈ ಭಾಗದಲ್ಲಿ ಹುಲಿ, ಚಿರತೆಗಳ ಹಾವಳಿ ನಿಯಂತ್ರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net