More

    ಮದುವೆ ಮನೆಯಲ್ಲಿ ಸ್ಮಶಾನ ಮೌನ; ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ವಧು

    ವಾಷಿಂಗ್ಟನ್: ಮದುವೆ ಎಂದರೆ ಸಡಗರ, ಸಂಭ್ರಮವಾಗಿದೆ. ಆದರೆ ಸಂತೋಷದಿಂದ ಇರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ವಿವಾಹವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅಗ್ನಿ ಅವಘಡದಲ್ಲಿ ವಧು ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.

    ಪೈಜ್ ರಡ್ಡಿ (19) ಮೃತ ಯುವತಿ. ಈ ಘಟನೆ ಅಮೆರಿಕಾದ ವಿಸ್ಕಾನ್ಸಿನ್‌ನಲ್ಲಿ ನಡೆದಿದೆತಿ. ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಮಗಳು ದುರಂತ ಅಂತ್ಯ ಕಂಡಿರುವ ಕುರಿತಾಗಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

    ನಡೆದಿದ್ದೇನು?: ಮೇ 23ರಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಪೈಜ್ ರಡ್ಡಿ ನಿದ್ರಿಸುತ್ತಿದ್ದಳು. ಈ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಹೊಗೆಯನ್ನು ಉಸಿರಾಡಿದ ವಧುವಿಗೆ ಮೆದುಳಿನ ರಕ್ತಸ್ರಾವವಾಗಿ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ಘಟನೆಗಳು ನಡೆದಿಲ್ಲ. ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಅವರು ಬೆಂಕಿಯಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹವನ-ಪೂಜೆಯೊಂದಿಗೆ ಹೊಸ ಸಂಸತ್​ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts