188 ವರ್ಷದ 'ಅಜ್ಜ'ನ ಸ್ನಾನ ನೋಡಿ... ದಾಖಲೆ ಪುಟದಲ್ಲಿ ದೀರ್ಘಾಯಸ್ಸು

ame snana
Published on

ಸೇಂಟ್ ಹೆಲೆನಾ (ದಕ್ಷಿಣ ಆಟ್ಲಾಂಟಿಕ್ ): ಈ ಚಿತ್ರದಲ್ಲಿ ಕಾಣಿಸುತ್ತಿರುವ ಆಮೆಯ ಹೆಸರು ಜೋನ್‌ಥಾನ್‌. ಇದರ ವಯಸ್ಸು ಇದೀಗ ಬರೋಬ್ಬರಿ 188.

ಸಾಮಾನ್ಯವಾಗಿ ಆಮೆಯ ಜೀವಿತಾವಧಿ 122 ವರ್ಷ. ಇದು ಭೂಮಿಯ ಮೆಲೆ ಅತಿ ಹೆಚ್ಚು ಕಾಲ ಜೀವಿಸುವ ಪ್ರಾಣಿ. ಆದರೆ ಜೋನ್‌ಥಾನ್‌ ವಯಸ್ಸು 188 ಮುಗಿದಿದ್ದು, ಇದೀಗ 189ನೇ ವಯಸ್ಸಿಗೆ ಕಾಲಿಟ್ಟಿದೆ. ಇದನ್ನು ಈಗ ಬದುಕಿರುವ ವಿಶ್ವದ ಅತ್ಯಂತ ದೀರ್ಘಾಯುಷಿ ಆಮೆ ಎಂದು ಪರಿಗಣಿಸಲಾಗಿದ್ದು, ಇದರ ವಯಸ್ಸು ದಾಖಲೆ ಪುಟದಲ್ಲಿ ಸೇರ್ಪಡೆಗೊಂಡಿದೆ.

ಇಲ್ಲಿಯವರೆಗೆ ಗಿನ್ನೆಸ್‌ ಪುಸ್ತಕದಲ್ಲಿ ಟಯಿ ಮಲಿಲಾ ಎಂಬ ಹೆಣ್ಣು ಆಮೆ ವಿಶ್ವದ ಅತ್ಯಂತ ದೀರ್ಘಾಯುಷಿ ಅಮೆಯಾಗಿತ್ತು. 1965ರಲ್ಲಿ ಇದು ಟೊಂಗಾದಲ್ಲಿ ಈ ಆಮೆ ಸತ್ತಾಗ ಅದರ ವಯಸ್ಸು 189 ಇತ್ತು.

ದಕ್ಷಿಣ ಆಟ್ಲಾಂಟಿಕ್ ಸಾಗರದ ಬ್ರಿಟಿಷ್ ಸಾಗರೋತ್ತರ ಸರಹದ್ದಿನ ಸೇಂಟ್ ಹೆಲೆನಾ ದ್ವೀಪದಲ್ಲಿದೆ ಈ ಗಂಡು ಆಮೆ. ಸೇಚ್‌ಲೇಸ್‌ ಎಂಬ ತಳಿಗೆ ಸೇರಿದ ಆಮೆ ಸಿರ್ಕಾದಲ್ಲಿ 1832ರಲ್ಲಿ ಹುಟ್ಟಿದೆ. ಇಲ್ಲಿಯವರೆಗೆ ಸಂಪೂರ್ಣ ಆರೋಗ್ಯದಿಂದಿದೆ, ನೆಲ ಮತ್ತು ನೀರು ಎರಡರಲ್ಲಿಯೂ ವಾಸಿಸಬಹುದಾಗಿರುವ ಕಾರಣ, ಆಮೆಯನ್ನು ಉಭಯಚರ ಎನ್ನಲಾಗುತ್ತದೆ. ಜೋನ್‌ಥಾನ್‌, ಇದೀಗ ವಿಶ್ವದ ಅತ್ಯಂತ ಹಳೆಯ ಉಭಯಚರ ಜೀವಿ ಎಂಬ ಬಿರುದು ಪಡೆದಿದೆ.

ಕೊಲ್ಕತಾದ ಅಲಿಪೋರ್ ವನ್ಯಧಾಮದಲ್ಲಿ 2006ರಲ್ಲಿ ಮೃತಪಟ್ಟ ಅಲ್‌ಡಾಬ್ರಾ ತಳಿಯ ದೈತ್ಯ ಆಮೆ 255 ವರ್ಷ ಬದುಕಿತ್ತು ಎಂದು ಹೇಳಲಾಗುತ್ತಿದ್ದರೂ ಇದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ.

ಸೇಂಟ್ ಹೆಲೆನಾ ದ್ವೀಪದ ಆಕರ್ಷಣೆಯಾಗಿರುವ ಜೋನ್‌ಥಾನ್‌ ಅಮೆ ಈಗಲೂ ಇಲ್ಲಿನ ಪ್ಲಾಂಟೇಷನ್ ಹೌಸ್‍ನಲ್ಲಿ ಅತ್ಯಂತ ಚಟುವಟಿಕೆಯಿಂದ ಓಡಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಇದಕ್ಕೆ ಸ್ನಾನ ಕೂಡ ಅತ್ಯಂತ ಪ್ರೀತಿಯಿಂದ ಮಾಡಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net