More

    ನಿರಂತರವಾಗಿ ಲೈಂಗಿಕ ಕಿರುಕುಳ; ಸಹಿಸಲಾಗದ 17ರ ಯುವತಿ ಬಾವಿಗೆ ಹಾರಿದಳು

    ಪ್ರತಾಪ್​ಘಡ್​: ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಇದೀಗ ಉತ್ತರ ಪ್ರದೇಶದಿಂದಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

    ಮೂವರು ಪುರುಷರಿಂದ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾದ 17ವರ್ಷದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರತಾಪ್​ಘಡ್​ದ ಬಾಗ್ರಾಯ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಈ ಯುವತಿಯ ಮೇಲೆ ಗುಡ್ಡು ಸಿಂಗ್​, ಡಬ್ಬು ಸಿಂಗ್​ ಮತ್ತು ಗುನ್ನು ತಿವಾರಿ ಎಂಬುವರು ಸತತವಾಗಿ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು ಎಂದು ವರದಿಯಾಗಿದೆ. ಈ ಮೂವರ ಹೆಸರನ್ನು ಮೃತ ಯುವತಿಯ ಕುಟುಂಬದವೇ ಉಲ್ಲೇಖಿಸಿದ್ದಾರೆ.

    ಸದ್ಯ ಮೂವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅದರಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಇನ್ನಿಬ್ಬರನ್ನು ಹುಡುಕಲು ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಎಲ್​ಜೆಪಿ ಮುಖ್ಯಸ್ಥನ ಪುತ್ರಿ ಸುಭಾಷಿಣಿ ಕಾಂಗ್ರೆಸ್ ಸೇರ್ಪಡೆ; ಬಿಹಾರ ಚುನಾವಣೆ ಸ್ಪರ್ಧೆ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts