ಕಾವೂರು ಅಂದರ್ ಬಾಹರ್ 17 ಮಂದಿ ಬಂಧನ

arrested
Published on

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲ್ಪುಗುಡ್ಡೆಯಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿದ್ದ 17 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ದೇರೆಬೈಲ್ ಕೊಂಚಾಡಿ ನಿವಾಸಿ ದಿಕ್ಷೀತ್ (31), ದಯಾನಂದ ಕೊಂಚಾಡಿ (40), ದೇರೆಬೈಲ್ ಕೊಂಚಾಡಿ ರಾಘವೇಂದ್ರ (41), ವೈಶಾಕ್ ಶೆಟ್ಟಿ ಯೆಯ್ಯಡಿ (25), ಪ್ರವೀಣ್ ಕುಮಾರ್ ಫರಂಗಿಪೇಟೆ (40), ಶಾಹುಲ್ ಹಮೀದ್ ಕಾಪು (50), ತಿಲಕ್‌ರಾಜ್ ನಡುಗೋಡು ಕಟೀಲು (35), ಜಯಾನಂದ್ ಎಸ್. ವಾಮಂಜೂರು (44), ಉಮೇಶ್ ದೇರೆಬೈಲ್ ಕೊಂಚಾಡಿ (41), ಗೌತಮ್ ದೇರೆಬೈಲ್ ಕೊಂಚಾಡಿ (32), ಲಾರೆನ್ಸ್ ರಾಜಾ ಡಿಸೋಜ ಕೂಳೂರು (48), ಇನಸ್ ಡಿಸೋಜ ಹೊಯ್ಗೆಗದ್ದೆ ಉಳ್ಳಾಲ (35), ಮುಹಮ್ಮದ್ ಅಶ್ರ್ ಉಲ್ಲಾಳ ಬೈಲ್, ಮೊಹಮ್ಮದ್ ಯಾಜ್ ಪೆರ್ಮನೂರ್ (42) , ಮುಸ್ತಾಾ ಉಳ್ಳಾಲ (61), ಸುನೀಲ್ ಡಿಸೋಜ ಆಡಂಕುದ್ರು (41), ಕಣ್ಣನ್ ತಮಿಳುನಾಡು (42) ಬಂಧಿತರು.

ಪ್ರಕರಣ ವಿವರ: ಉತ್ತರ ಉಪವಿಭಾಗದ ಎಸಿಪಿ ಅವರಿಗೆ ಲಭಿಸಿದ ಮಾಹಿತಿಯಂತೆ ಕಾವೂರು ಪೊಲಿಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಬೊಲ್ಪುಗುಡ್ಡೆ ಮನೆಯೊಂದಕ್ಕೆ ಶನಿವಾರ ರಾತ್ರಿ ದಾಳಿ ನಡೆಸಿದ್ದಾರೆ. ಅಲ್ಲಿ ಆರೋಪಿಗಳು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಆಡುತ್ತಿದ್ದರು. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು 1,92,000 ರೂ. ನಗದು, 18 ಮೊಬೈಲ್ ೆನ್ ಸಹಿತ ಒಟ್ಟು ಸುಮಾರು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಬಾಡಿಗೆ ಮನೆಯ ಮಾಲೀಕರ ಮೇಲೂ ಕೇಸು ದಾಖಲಾಗಿದೆ.

ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಮಾರ್ಗದರ್ಶನದಲ್ಲಿ ಕಾವೂರು ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ಸಿಬ್ಬಂದಿ ಚಂದ್ರು, ರೆಜಿ, ದಾಮೋದರ, ಹಾಲೇಶ್, ಠಾಣಾ ಸಿಬ್ಬಂದಿ ಎಎಸ್‌ಐ ಜಯರಾಮ್, ಮಂಜುನಾಥ, ನಾಗರಾಜ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net