ಬದ್ಧತೆ ಯುವ ಪೀಳಿಗೆಗೆ ಸ್ಫೂರ್ತಿ : ಪ್ರೊ.ಪಿ.ಎನ್.ಮುಡಿತ್ತಾಯ ಬಣ್ಣನೆ

happy birthday
Published on

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ, ಪೈವಳಿಕೆ ಬಾಯಿಕಟ್ಟೆ ಅಯ್ಯಪ್ಪ ಭಜನಾ ಮಂದಿರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನಾಚರಣೆ ಜರುಗಿತು.

ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ.ಪಿ.ಎನ್.ಮುಡಿತ್ತಾಯ ಮಾತನಾಡಿ, ಭಾರತ ರತ್ನ, ಸರ್ ಎಂ.ವಿಶ್ವೇಶ್ವರಯ್ಯ ಅವರ 101 ವರ್ಷಗಳ ಸಾರ್ಥಕ ಜೀವನ, ವೃತ್ತಿ ಕೌಶಲ, ಪ್ರಾಮಾಣಿಕತೆ, ಬದ್ಧತೆ, ಸೇವಾ ಮನೋಭಾವ, ಯುವ ಪೀಳಿಗೆಗೆ ಸ್ಫೂರ್ತಿ ಎಂದರು.

ನಿವೃತ್ತ ಮುಖ್ಯಶಿಕ್ಷಕ ಕೆ.ಕೋಚಣ್ಣ ಶೆಟ್ಟಿ, ಹಿರಿಯ ಸಾಹಿತಿ ಡಾ.ಪ್ರಮೀಳಾ ಮಾಧವ, ಉಪನ್ಯಾಸಕ ಶಿವಶಂಕರ ಪಿ, ಮುಖ್ಯಶಿಕ್ಷಕ ಶ್ಯಾಮ ಭಟ್, ನಿವೃತ್ತ ಶಿಕ್ಷಕಿ ಶ್ರೀಕುಮಾರಿ, ಶಾಂಭವಿ ಕೆ.ಶೆಟ್ಟಿ, ಕೆ.ಮಾಧವ, ಪತ್ರಕರ್ತ ಜೋನ್ ಡಿಸೋಜ, ವೆಂಕಟ್ರಮಣ ಆಚಾರ್ಯ, ಶಿವಾನಂದ ಚೌಟ, ಅಶೋಕ ಆಳ್ವ, ಅಭಿಷೇಕ್ ಡಿ, ದಿನಕರ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net