ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಫುಟ್​ಪಾತ್​ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್​ ಹರಿದು 15 ಜನ ಸಾವು!

Accident
Published on

ಸೂರತ್​: ಫುಟ್​ಪಾತ್​ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಟ್ರಕ್​​ ಹರಿದು 15 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಟ್ರಕ್​ ಮತ್ತು ಕಬ್ಬು ತುಂಬಿದ ಟ್ರ್ಯಾಕ್ಟರ್​ ನಡುವೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಟ್ರಕ್​ ಡ್ರೈವರ್​, ಫುಟ್​ಪಾತ್​ ಕಡೆ ವಾಹನವನ್ನು ನುಗ್ಗಿಸಿದ್ದಾನೆ. ಈ ವೇಳೆ ಸವಿನಿದ್ದೆಯಲ್ಲಿದ್ದ 15 ವಲಸೆ ಕಾರ್ಮಿಕರ ಮೇಲೆ ಟ್ರಕ್​ ಹರಿದು ಮೃತಪಟ್ಟಿದ್ದಾರೆ. ಕಾರ್ಮಿಕರು ಮಾಂಡವಿ ಹೆದ್ದಾರಿಯ ಫುಟ್​ಪಾತ್​ ಮೇಲೆ ಮಲಗಿದ್ದಾಗ ದುರ್ಘಟನೆ ಸಂಭವಿಸಿದೆ.

ಮೃತರೆಲ್ಲರು ರಾಜಸ್ಥಾನದ ಬನ್​ಸ್ವಾರ ಮೂಲದವರೆಂದು ತಿಳಿದುಬಂದಿದೆ. ಮೃತರ ಸಾವಿಗೆ ಬಿಜೆಪಿ ಮುಖಂಡ ಹಾಗೂ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಸಾವಿನ ದುಃಖ ತಡೆದುಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸಿಕೊಳ್ಳುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net