1440 ಲೀಟರ್ ಸ್ಪಿರಿಟ್ ವಶ

New Project (11)
Published on

ಕಾಸರಗೋಡು: ನಗರದ ಅಡ್ಕತ್ತಬೈಲಿನಲ್ಲಿ ನಗರ ಠಾಣೆ ಎಸ್‌ಐ ಅನ್ಸಾರ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 1,440 ಲೀಟರ್ ಸ್ಪಿರಿಟ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಪ್ರಣವ್ ಶೆಣೈ, ಅಡ್ಕತ್ತಬೈಲು ತಾಳಿಪಡ್ಪು ನಿವಾಸಿ ಅನೂಷ್, ಕಾಞಿರಪಳ್ಳಿ ನಿವಾಸಿ ವಿ.ಸಿ.ಥಾಮಸ್ ಬಂಧಿತರು. ತಲಾ 35 ಲೀಟರ್‌ನ 47 ಕ್ಯಾನುಗಳಲ್ಲಿ ತುಂಬಿಡಲಾಗಿದ್ದ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಸಂಬಂಧಿಸಿದ ವಾಹನದಲ್ಲಿ ಕ್ಯಾನುಗಳಲ್ಲಿ ನೀರು ಸಾಗಿಸುತ್ತಿರುವ ನೆಪದಲ್ಲಿ ಸ್ಪಿರಿಟ್ ಸಾಗಾಟ ನಡೆಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net