ಜಿಮ್​ ಮಾಡದೆ, ಡಯಟ್ ಇಲ್ಲದೇ 65 KG ತೂಕ ಇಳಿಸಿಕೊಂಡಿದ್ಹೇಗೆ ಈ ಯುವತಿ! ಇಲ್ಲಿದೆ ಅಚ್ಚರಿಯ ಮಾಹಿತಿ... Weight Loss

Weight loss
Published on

Weight loss : ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅಲ್ಲದೆ, ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ದೃಢಸಂಕಲ್ಪ ಇದ್ದರೆ ಮಾತ್ರ ತೂಕವನ್ನು ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲೆಂದು ಜಿಮ್​ಗೆ ಹೋಗುವುದು ಮತ್ತು ಡಯಟ್ ಫಾಲೋ ಮಾಡುವುದು ಇಂದು ಸಾಮಾನ್ಯ. ಆದರೆ, ಎಷ್ಟೇ ಕಸರತ್ತು ಮಾಡಿದರೂ ಕೆಲವರು ಫಲಿತಾಂಶವನ್ನು ಪಡೆಯುವುದಿಲ್ಲ. ಏಕೆಂದರೆ ಅವರು ಅದನ್ನು ವ್ಯವಸ್ಥಿತವಾಗಿ ಹೇಗೆ ಮಾಡಬೇಕೆಂದು ತಿಳಿದಿರುವುದಿಲ್ಲ. ಆದರೆ, ಡಿಜಿಟಲ್ ಕ್ರಿಯೆಟರ್​ ನೋನು ತನ್ನ ದೇಹದ ತೂಕವನ್ನು ಅರ್ಧದಷ್ಟು ಕಡಿಮೆ ಮಾಡಿದ ತನ್ನ ಸ್ಫೂರ್ತಿದಾಯಕ ಕತೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾರ್ಡಿಯೋ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ನೋನು. ಈ ಹಿಂದೆ ಸ್ವಲ್ಪ ದೂರ ನಡೆಯಲು ಕೂಡ ಯೋಚಿಸುತ್ತಿದ್ದ ನೋನು, ಇಂದು ತಮ್ಮ ಜೀವನ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದ್ದಾರೆ. ಓಟ, ನಡಿಗೆ ಹಾಗೂ ಸ್ಕಿಪ್ಪಿಂಗ್ ಇತ್ಯಾದಿ ಹೃದಯ ಬಡಿತವನ್ನು ಹೆಚ್ಚಿಸುವ ಯಾವುದೇ ವ್ಯಾಯಾಮವನ್ನು ಫಿಟ್‌ನೆಸ್ ಕಾರ್ಯಕ್ರಮದಲ್ಲಿ ಧೈರ್ಯದಿಂದ ಸೇರಿಸಬಹುದು ಎನ್ನುತ್ತಾರೆ ನೋನು.

ಹಾಯ್, ನಾನು ನೋನು. ನಾನು ಇಂದು ಈ ಹಂತಕ್ಕೆ (ಅವಳ ಮೊದಲು ಮತ್ತು ನಂತರದ ತೂಕ ನಷ್ಟ ಚಿತ್ರವನ್ನು ಉಲ್ಲೇಖಸಿ) ಬಂದಿದ್ದು, ಬರೋಬ್ಬರಿ 65 ಕೆಜಿ ತೂಕ ಕಳೆದುಕೊಂಡಿದ್ದೇನೆ. ನಾನು ಮಾಡಿದ ಮುಖ್ಯ ವ್ಯಾಯಾಮವೆಂದರೆ ಅದು ಕಾರ್ಡಿಯೋ. ನನ್ನ ತೂಕ ಈ ಹಿಂದೆ 130 ಕೆ.ಜಿ ಇತ್ತು. ಅತಿ ತೂಕದ ಕಾರಣ, ಬಹಳಷ್ಟು ದೂರ ನಡೆಯಲು ಸಹ ತುಂಬಾ ಕಷ್ಟಕರವಾಗಿತ್ತು. ನನಗೆ ಈಗಲೂ ನೆನಪಿದೆ, ಮೊದಲನೇ ದಿನ ನಾನು ಪ್ರಾರಂಭಿಸಿದಾಗ (ತೂಕ ಇಳಿಸುವ ಪ್ರಯಾಣ), ನಾನು ಕೇವಲ 700 ಮೀ ನಡೆಯಲು ಸಾಧ್ಯವಾಯಿತು. ಅದೇ ನನ್ನ ಮಿತಿಯಾಗಿತ್ತು. ನಾನು ತುಂಬಾ ದಣಿದಿದ್ದೆ. ಆದರೆ ಮರುದಿನ, ನಾನು ಸುಮಾರು 1 ಕಿಮೀ ನಡೆದೆ ಎಂದು ನೋನು ಹೇಳಿದ್ದಾರೆ.

ಈ ಹಿಂದೆ ಓಡುವುದನ್ನು ಕೂಡ ನಾನು ಯೋಚಿಸಲಾಗಲಿಲ್ಲ. ಅಧಿಕ ತೂಕವಿದ್ದರೆ ದೂರ ಓಡುವುದು ಒಳ್ಳೆಯದಲ್ಲ. ಓಡುವುದಕ್ಕೂ ಆಗುವುದಿಲ್ಲ. ಅಷ್ಟೇ ಯಾಕೆ ತುಂಬಾ ದೂರ ನಡೆಯಲು ಸಾಧ್ಯವಿಲ್ಲ. ಆದರೆ, ಇಂದು ನಾನು ಎಲ್ಲವನ್ನೂ ಮಾಡಬಲ್ಲೆ. ದೇಹದಲ್ಲಿನ ಹೆಚ್ಚಿನ ಕೊಬ್ಬನ್ನು ಸುಡುವುದು ಬಹಳ ಮುಖ್ಯ. ಕಾರ್ಡಿಯೋ ಇದಕ್ಕೆ ಸಹಾಯ ಮಾಡುತ್ತದೆ. ದೈಹಿಕ ಸಾಮರ್ಥ್ಯವು ಕೂಡ ಹೆಚ್ಚುತ್ತದೆ. ಜೀವನದ ಮಾದರಿ ಬದಲಾಗುತ್ತದೆ. ದೇಹದಲ್ಲಿನ ಬದಲಾವಣೆಗಳನ್ನು ನಾವು ನೇರವಾಗಿ ತಿಳಿದುಕೊಳ್ಳಬಹುದು ಎಂದು ನೋನು ಹೇಳುತ್ತಾರೆ.

ನೀವು ತುಂಬಾ ಭಾರವಾಗಿದ್ದರೆ, ನಿಮ್ಮ ಕೀಲುಗಳು ಓಡಲು ಸಹಕರಿಸುವುದಿಲ್ಲ. ಹೀಗಾಗಿ ನಾನು ನಡಿಗೆಯನ್ನು ಇಷ್ಟಪಟ್ಟು, ಅದನ್ನು ಆನಂದಿಸಿದೆ ಎಂದರ್ಥವಲ್ಲ. ಅಸಲಿಗೆ ನಾನು ನಡಿಗೆಯನ್ನು ದ್ವೇಷಿಸುತ್ತಿದ್ದೆ ಮತ್ತು ವ್ಯಾಯಾಮ ಕೂಡ ಇಷ್ಟವಿರಲಿಲ್ಲ. ನನ್ನ ಜೀವನದಲ್ಲಿಯೂ ನಾನು ನಡೆಯಲು ಅಥವಾ ಓಡುವುದನ್ನು ಆನಂದಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ, ಈಗ ನಾನು ಬದಲಾಗಿದ್ದೇನೆ. ಎಲ್ಲವನ್ನು ಮಾಡುತ್ತೇನೆ. ಹಾಗಾಗಿ, ನೀವು ದಪ್ಪಗಿಲ್ಲ ಅಂದರೆ, ದಪ್ಪಗಿರುವವರಿಗೆ ಜಿಮ್‌ಗೆ ಹೋಗಲು, ವರ್ಕೌಟ್​ ಮಾಡಲು ಹೇಳಿ ಎಂದು ನೋನು ಕರೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net