ಅರ್ಧದಿನದಲ್ಲಿ 122 ಹೊಸ ಕರೊನಾ ಕೇಸ್​​ಗಳು: ಇವತ್ತು ಈ ಜಿಲ್ಲೆಗೆ ಬಿಗ್​ ಶಾಕ್​...

Covid19 Exit plan
Published on

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆಯಿಂದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗೇ ಮತ್ತೊಂದೆಡೆ ಕರೊನಾ ಸೋಂಕಿತರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದೆ.

ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನ 12ಗಂಟೆಯವರೆಗೆ ಒಟ್ಟು 122 ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2405ಕ್ಕೆ ಏರಿದೆ. ಅದರಲ್ಲಿ ಸಕ್ರಿಯ ಪ್ರಕರಣಗಳು 1596, ಗುಣಮುಖರಾಗಿ ಡಿಸ್​ಚಾರ್ಜ್​ ಆದವರು 762 ಮಂದಿ. ಹಾಗೇ ಮರಣ ಹೊಂದಿದವರ ಸಂಖ್ಯೆ 45.

ನಿನ್ನೆ ಚಿತ್ರದುರ್ಗದಲ್ಲಿ ಬರೋಬ್ಬರಿ 20 ಕೊವಿಡ್​-19 ಕೇಸ್​ಗಳು ಪತ್ತೆಯಾಗಿದ್ದವು. ಆದರೆ ಇವತ್ತು ಒಂದೂ ಪ್ರಕರಣಗಳು ಅಲ್ಲಿ ಪತ್ತೆಯಾಗಿಲ್ಲ. ಬದಲಿಗೆ ಕಲಬುರಗಿಗೆ ದೊಡ್ಡ ಶಾಕ್​ ಎದುರಾಗಿದೆ. ಅಲ್ಲಿವತ್ತು 28 ಮಂದಿಗೆ ಕರೊನಾ ದೃಢಪಟ್ಟಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು..ಇಲ್ಲಿದೆ ಮಾಹಿತಿ...
  • ಉತ್ತರ ಕನ್ನಡ-6
  • ದಕ್ಷಿಣ ಕನ್ನಡ-11
  • ಚಿಕ್ಕಮಗಳೂರು-3
  • ಉಡುಪಿ-9
  • ಯಾದಗಿರಿ-16
  • ಹಾಸನ-15
  • ಬಳ್ಳಾರಿ-1
  • ಬೆಂಗಳೂರು ನಗರ-6
  • ಬೆಂಗಳೂರು ಗ್ರಾಮೀಣ- 2
  • ವಿಜಯಪುರ-2
  • ಬೆಳಗಾವಿ-4
  • ತುಮಕೂರು-1
  • ಮಂಡ್ಯ-1
  • ಕಲಬುರಗಿ-28
  • ರಾಯಚೂರು-5
  • ಬೀದರ್​-12
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net