ಮೆಗಾಸ್ಟಾರ್ ಚಿರಂಜೀವಿ ಮೆಚ್ಚಿದ ‘11:11’ ಸಿನಿಮಾ ಶೀರ್ಷಿಕೆ

709 KB
Published on

ಬೆಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕನ್ನಡದ ಚಿತ್ರವೊಂದರ ಪೋಸ್ಟರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಆ ಚಿತ್ರದ ಶೀರ್ಷಿಕೆಯೂ ಅಷ್ಟೇ ವಿಶೇಷವಾಗಿದೆ. '11:11' ಇದು ಸಿನಿಮಾ ಟೈಟಲ್. ವಿಶೇಷ ಏನೆಂದರೆ ಈಗಾಗಲೇ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಾಜೀವ್ ಸಲೂರಿ, ಈ ಚಿತ್ರದಲ್ಲಿ ನಾಯಕನಾಗಿ ಮೊದಲ ಸಲ ಬಣ್ಣ ಹಚ್ಚಿದ್ದಾರೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಶೂಟಿಂಗ್ ಸಹ ಶುರುವಾಗಲಿದೆ.

ಟ್ರೈಗರ್ ಹಿಲ್ಸ್ ಮತ್ತು ಸ್ವಸ್ತಿಕಾ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಳ್ಳಾರಿ ಮೂಲದ ಗಾಜುಲ ವೀರೇಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಗಾಳಿ ಸಂದೀಪ್ ಲೈನ್ ನಿರ್ಮಾಪಕರಾಗಿದ್ದಾರೆ. ಕಿಟ್ಟು ನಲ್ಲೂರಿ ಎಂಬುವವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಹಲವು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಮುಖ್ಯ ಪಾತ್ರದಲ್ಲಿ ರಾಜೀವ್‌ ಸಲೂರಿ, ವರ್ಷ ವಿಶ್ವನಾಥ್ ಇವರೊಂದಿಗೆ ಕೋಟಿ ಸಲೂರಿ, ಸದನ್, ಲಾವಣ್ಯ, ರಾಜ ರವೀಂದ್ರ, ರಾಜಶ್ರೀ ಮುಂತಾದವರು ನಟಿಸುತ್ತಿದ್ದಾರೆ. ಮೆಲೊಡಿ ಕಿಂಗ್ ಮಣಿಶರ್ಮ ಸಂಗೀತ, ಈಶ್ವರ್ ಛಾಯಾಗ್ರಹಣ, ರವಿ ಮನ್ಲ ಸಂಕಲನ, ಸಂಭಾಷಣೆ ಪವನ್.ಕೆ.ಅಚಲ, ಪ್ರಚಾರ ಆರ್.ಚಂದ್ರಶೇಖರ್ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net