More

    ಸಿನಿಮಾ ಸಂಕ್ರಾಂತಿ; ಪೊಂಗಲ್ ಆಚರಣೆಗೆ ರೆಡಿಯಾದ ಟಾಲಿವುಡ್, ಕಾಲಿವುಡ್

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬ ಎಂದರೆ ವಿಶೇಷ ಸಡಗರ. ಬೆಳೆ ಸಲು ಬರುವ ಸಂದರ್ಭವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸುವುದುಂಟು. ಜತೆಗೆ ಎಳ್ಳು ಬೆಲ್ಲ ಹಂಚುತ್ತಾ ಹಬ್ಬ ಆಚರಿಸುವುದರಲ್ಲಿರುವ ಖುಷಿಯೇ ಬೇರೆ! ಇಂತಹ ಶುಭ ಸಂದರ್ಭ ಚಿತ್ರರಂಗಕ್ಕೂ ಸುಗ್ಗಿ ಹಬ್ಬವೇ ಆಗಿದೆ. ಇದರ ಸಿಹಿ ಹೆಚ್ಚಿಸಲು ಈ ಬಾರಿ ತಮಿಳು, ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ.

    ತೆಲುಗಿನಲ್ಲಿ ಕನ್ನಡತಿಯರ ದರ್ಬಾರ್
    ಟಾಲಿವುಡ್‌ನಲ್ಲಿ ಸ್ಟಾರ್ ನಟರ ನಾಲ್ಕು ಸಿನಿಮಾಗಳು ಇದೇ ವಾರಾಂತ್ಯಕ್ಕೆ ತೆರೆ ಕಾಣುತ್ತಿವೆ. ಎಲ್ಲ ಸಿನಿಮಾಗಳಲ್ಲೂ ಕನ್ನಡದ ನಟಿಯರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದು ವಿಶೇಷ. ಮಹೇಶ್ ಬಾಬು ಹಾಗೂ ಶ್ರೀಲೀಲಾ ಅಭಿನಯಿಸಿರುವ ತ್ರಿವಿಕ್ರಮ್ ನಿರ್ದೇಶನದ ಚಿತ್ರ ‘ಗುಂಟೂರು ಕಾರಂ’, ತೇಜಾ ಸಜ್ಜ ಹಾಗೂ ಅಮೃತಾ ಅಯ್ಯರ್ ಮುಖ್ಯ ಭೂಮಿಕೆಯಲ್ಲಿರುವ ಪ್ರಶಾಂತ್ ವರ್ಮ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ‘ಹನುಮಾನ್’ ಜ.12ಕ್ಕೆ ತೆರೆಕಾಣುತ್ತಿವೆ. ದಗ್ಗುಬಾಟಿ ವೆಂಕಟೇಶ್, ಶ್ರದ್ಧಾ ಶ್ರೀನಾಥ್ ನಟಿಸಿರುವ ಶೈಲೇಶ್ ಕೊಲನು ನಿರ್ದೇಶಿಸಿರುವ ‘ಸೈಂಧವ್’ ಜ.13ಕ್ಕೆ ರಿಲೀಸ್ ಆಗುತ್ತಿದೆ. ಇದರಲ್ಲಿ ನವಾಜುದ್ದಿನ್ ಸಿದ್ದಿಕಿ, ರುಹಾನಿ ಶರ್ಮ, ಆರ್ಯ, ಆೃಂಡ್ರಿಯಾ ಜೆರೆಮಿಯಾ ಮುಖ್ಯ ತಾರಾಗಣದಲ್ಲಿದ್ದಾರೆ. ಇನ್ನು ನಾಗಾರ್ಜುನ ಹಾಗೂ ಆಶಿಕಾ ರಂಗನಾಥ್ ನಟನೆಯ ವಿಜಯ್ ಬಿನ್ನಿ ಆೃಕ್ಷನ್-ಕಟ್ ಹೇಳಿರುವ ‘ನಾ ಸಾಮಿ ರಂಗ’ ಜ.14ಕ್ಕೆ ರಿಲೀಸ್ ಆಗುತ್ತಿದೆ.

    ತಮಿಳಿನಲ್ಲೂ 4 ಸಿನಿಮಾಗಳು:
    ಧನುಷ್ ಹಾಗೂ ಕನ್ನಡದ ಶಿವರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಅರುಣ್ ಮಾಥೇಶ್ವರನ್ ನಿರ್ದೇಶನದ ಆೃಕ್ಷನ್ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’, ಶಿವಕಾರ್ತಿಕೇಯನ್, ರಕುಲ್ ಪ್ರೀತ್ ಸಿಂಗ್ ಅಭಿನಯದ ಸೈನ್ಸ್ ಫಿಕ್ಷನ್ ಸಿನಿಮಾ ‘ಅಯಲಾನ್’, ಎ.ಎಲ್ ವಿಜಯ್ ನಿರ್ದೇಶಿಸಿರುವ ಅರುಣ್ ವಿಜಯ್, ಆ್ಯಮಿ ಜಾಕ್ಸನ್ ಮತ್ತು ಕನ್ನಡಿಗ ಭರತ್ ಬೋಪಣ್ಣ ನಟಿಸಿರುವ ಚಿತ್ರ ‘ಮಿಷನ್: ಚಾಪ್ಟರ್ 1’, ಜತೆಗೆ ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ವಿಜಯ್ ಸೇತುಪತಿ ಹಾಗೂ ಕತ್ರಿನಾ ಕ್ೈ ನಟಿಸಿರುವ ಶ್ರೀರಾಮ್ ರಾಘವನ್ ನಿರ್ದೇಶನದ ಸಿನಿಮಾ ‘ಮೆರ‌್ರಿ ಕ್ರಿಸ್ಮಸ್’ ಸಿನಿಮಾಗಳು ಜ.12ಕ್ಕೆ ತೆರೆಕಾಣುತ್ತಿವೆ.

    ಕನ್ನಡ ಒಂದು ಮಲಯಾಳಂ ಎರಡು:
    ಒಂದೆಡೆ ತೆಲುಗು ಹಾಗೂ ತಮಿಳು ಭಾಷೆಗಳ 8 ಸಿನಿಮಾಗಳು ರಿಲೀಸ್ ಆಗುತ್ತಿದ್ದರೆ ಮತ್ತೊಂದೆಡೆ ಕನ್ನಡದಲ್ಲಿ ಒಂದು ಸಿನಿಮಾ ಮಾತ್ರ ಬಿಡುಗಡೆಯಾಗುತ್ತಿದೆ. ಕಳೆದ ವಾರ ಕನ್ನಡದ ಮೂರು ಸಿನಿಮಾಗಳು ರಿಲೀಸ್ ಆಗಿದ್ದು, ಹೆಚ್ಚು ಸದ್ದು ಮಾಡಿರಲಿಲ್ಲ. ರಾಜಕುಮಾರ್ ಅಸ್ಕಿ ಆೃಕ್ಷನ್-ಕಟ್ ಹೇಳಿರುವ ರಂಗಾಯಣ ರಘು, ರಾಘವೇಂದ್ರ ರಾಜಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ರಂಗಸಮುದ್ರ’ ಜ.12ಕ್ಕೆ ರಿಲೀಸ್ ಆಗುತ್ತಿದೆ. ಜತೆಗೆ ಮಿಧುನ್ ಮಾನ್ಯುವಲ್ ಥಾಮಸ್ ನಿರ್ದೇಶನದ ಜಯರಾಂ ಸುಬ್ರಮಣಿಯಂ ನಟಿಸಿರುವ ‘ಅಬ್ರಹಂ ಒಜ್ಲರ್’ ಮತ್ತು ‘ಪಿನ್ನಿಲ್ ಓರಲ್’ ಮಲಯಾಳಂ ಚಿತ್ರಗಳು ಜ. 12ರಂದು ತೆರೆಗೆ ಬರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts