ಕೋವಿಡ್​ಗಾಗಿ ಪರೀಕ್ಷೆ ನಡೆಸಿದರೆ ಹಿಮಾಚಲದಲ್ಲಿ ಇನ್​ಫ್ಲೂಯೆನ್ಜಾ ರೀತಿಯ ಜ್ವರದಿಂದ ಬಳಲುತ್ತಿರುವ 10 ಸಾವಿರ ಜನ ಪತ್ತೆ

himachala pradesh
Published on

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕೋವಿಡ್​ 19 ಸೋಂಕಿನ ಕುರಿತು ಇದುವರೆಗೆ 70 ಲಕ್ಷ ಜನರನ್ನು ಪರೀಕ್ಷಿಸಲಾಗಿದೆ. ಇವರ ಪೈಕಿ ಯಾರಲ್ಲೂ ಕೋವಿಡ್​ ಲಕ್ಷಣಗಳು ಪತ್ತೆಯಾಗಿಲ್ಲ. ಆದರೆ ಇನ್​ಫ್ಲೋಯೆನ್ಜಾ ರೀತಿಯ ಜ್ವರದಿಂದ ಬಳಲುತ್ತಿರುವ 10 ಸಾವಿರ ಜನ ಪತ್ತೆಯಾಗಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಹಿಮಾಚಲಪ್ರದೇಶ ಸಿಎಂ ಜೈರಾಮ್​ ಠಾಕೂರ್​ ಈ ವಿಷಯ ತಿಳಿಸಿದ್ದಾರೆ. ಈ ಪೈಕಿ 700 ಜನರನ್ನು ಹೆಚ್ಚುವರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಳಿದವರ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದರು.

ಕೋವಿಡ್​ ಲಾಕ್​ಡೌನ್​ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಹಿಮಾಚಲಪ್ರದೇಶ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಅವರೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ. ಅವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಕೋವಿಡ್​ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲಿ ಇರುವರೋ ಅಲ್ಲಿಯೇ ಇದ್ದು, ಬಳಿಕ ರಾಜ್ಯಕ್ಕೆ ಮರಳುವಂತೆ ಅವರೆಲ್ಲರಿಗೂ ತಿಳಿಸಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net