

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಬಡ ವರ್ಗದ ಕೂಲಿ ಕಾರ್ಮಿಕರಿಗೆ ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 10 ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್ ಮಂಜೂರಾಗಿದ್ದು, ಅದರಲ್ಲಿ ಮೂರು ಕಡೆಗಳಲ್ಲಿ ಆರಂಭವಾಗಿದೆ. ಹೆಚ್ಚಿನ ಎಲ್ಲ ಪಟ್ಟಣ ಪ್ರದೇಶದಲ್ಲಿ ಕ್ಯಾಂಟೀನ್ ಕಾರ್ಯಾಚರಿಸುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ, ಬೆಂಗಳೂರು ನಗರದ ಎಲ್ಲ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾಚರಿಸುತ್ತಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಪ್ರಭಾರ ಜಿಲ್ಲಾಧಿಕಾರಿ ಸಂತೋಷ್, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಪಂ ಮುಖ್ಯಾಕಾರ್ಯನಿರ್ವಣಾಧಿಕಾರಿ ಡಾ.ಆನಂದ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಲ್ವಿನ್ ಮತ್ತಿತತರು ಉಪಸ್ಥಿತರಿದ್ದರು.
ನೂರಾರು ಅಹವಾಲು ಸ್ವೀಕಾರ
ಕಿನ್ನಿಗೋಳಿ ಬಲ್ಲಾಣದಲ್ಲಿ ಬಜಪೆ ಮತ್ತು ಕಿನ್ನಿಗೋಳಿಗೆ ಜಂಟಿಯಾಗಿ ಗೋಮಾಳ ಜಮೀನಿನಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಜನರ ವಿರೋಧವಿದೆ, ಇದನ್ನು ರದ್ದು ಪಡಿಸಬೇಕು ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ತಂದು ಕಿನ್ನಿಗೋಳಿಯ ಎಳತ್ತೂರುನಲ್ಲಿ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಇದಕ್ಕೆ ವಿರೋಧವಿದೆ ಎಂದು ಗಂಗಾಧರ ಮನವಿ ಮಾಡಿದರು. ಕಿನ್ನಿಗೋಳಿ ಬಿತ್ತಿಲ್ ಪರಿಸರದಲ್ಲಿ ದ್ರವ ತ್ಯಾಜ್ಯ ತೆರೆದ ಚರಂಡಿಯಲ್ಲಿ ಹರಿಯುತ್ತಿದೆ ಅದರಿಂದ ಸಮಸ್ಯೆಯಾಗುತ್ತಿದೆ ಎಂದು ಜೆರಾಲ್ಡ್ ಮಾಥಾಯಿಸ್, ನವೀನ್ ಮತ್ತಿತರರು ಮನವಿ ಸಲ್ಲಿಸಿದರು, ಕಿನ್ನಿಗೋಳಿ ವ್ಯಾಪ್ತಿಯ ನೂರಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದರು.
ಕ್ಷೇತ್ರದಲ್ಲಿ ಮೂರು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವುದರ ಮೂಲಕ ಬಡ ಕೂಲಿವರ್ಗಕ್ಕೆ ಸಹಕಾರಿಯಾಗಲಿದೆ. ಕ್ಷೇತ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಅನುದಾನ ಕೊರತೆ ಇದ್ದು, ತಮ್ಮ ಜಿಲ್ಲಾ ಉಸ್ತುವಾರಿ ಸಚಿರ ಮುಂದಾಳತ್ವವದಲ್ಲಿ ಅನುದಾನ ನೀಡುವಲ್ಲಿ ಸಹಕಾರ ಬೇಕಾಗಿದೆ. ಉಮಾನಾಥ ಕೋಟ್ಯಾನ್, ಶಾಸಕ