80ರ ದಶಕದಲ್ಲಿ 1 ಕೆಜಿ ಗೋಧಿಗೆ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್​ ಆಗ್ತಿರೋ ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

Wheat 1
Published on

ನವದೆಹಲಿ: ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​) ಪರ್ವೀನ್​ ಕಾಸ್ವಾನ್​ ಅವರು 80ರ ದಶಕದಲ್ಲಿ ತಮ್ಮ ತಾತ ಭಾರತ ಸರ್ಕಾರಕ್ಕೆ ಗೋಧಿ ಬೆಳೆ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ಹಳೆಯ ರಶೀದಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

80ರ ದಶಕದಲ್ಲಿ ಒಂದು ಕೆಜಿ ಗೋಧಿಗೆ ಕೇವಲ 1.6 ರೂಪಾಯಿ ಇದೆ. 1987ರಲ್ಲಿ ಗೋಧಿ ಮಾರಾಟ ಮಾಡಿರುವ ರಶೀದಿಯನ್ನು ಪರ್ವೀನ್​ ಕಾಸ್ವಾನ್ ಟ್ವಿಟರ್​ನಲ್ಲಿ​ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಬಗೆ ಬಗೆಯ ಕಾಮೆಂಟ್​ಗಳು ಹರಿಬಿಡುತ್ತಿದ್ದಾರೆ.

ತಮ್ಮ ಹಿರಿಯರು ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಶೇಖರಿಸಿಡುವ ಅಭ್ಯಾಸ ಹೊಂದಿದ್ದರು ಎಂಬುದನ್ನು ಪ್ರಸ್ತಾಪಿಸಿರುವ ಪರ್ವೀನ್​ ಕಾಸ್ವಾನ್​, ನಮ್ಮ ಅಜ್ಜನಿಗೆ ಎಲ್ಲ ದಾಖಲೆಗಳನ್ನು ಹಾಗೆಯೇ ಇಡುವ ಅಭ್ಯಾಸವಿತ್ತು. ಈ ದಾಖಲೆಯನ್ನು ಜೆ ಫಾರಂ ಎಂದು ಕರೆಯಲಾಗುತ್ತದೆ. ಅವರ ಸಂಗ್ರಹಣೆಯಲ್ಲಿ ಕಳೆದ 40 ವರ್ಷಗಳಲ್ಲಿ ಮಾರಾಟವಾದ ಬೆಳೆಗಳ ಎಲ್ಲಾ ದಾಖಲೆಗಳಿವೆ. ಮನೆಯಲ್ಲಿಯೇ ಅದರ ಅಧ್ಯಯನ ಮಾಡಬಹುದು ಎಂದು ಹೇಳಿದರು.

ಇದಕ್ಕೂ ಮುನ್ನ ಜಾರ್ಖಂಡ್‌ನಲ್ಲಿ 80ರ ದಶಕದಲ್ಲಿ 20,000 ರೂಪಾಯಿಗೆ ಖರೀದಿಸಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಿಸಿಗೆ ಸಂಬಂಧಿಸಿದ ಹಳೆಯ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಬೈಕ್ ಸವಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಎರಡ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಯಲ್​ ಎನ್​ಫೀಲ್ಡ್​ 1986 ರಲ್ಲಿ 18,700 ರೂಪಾಯಿಗೆ ಖರೀದಿಸಲಾಗಿತ್ತು ಎಂಬುದನ್ನು ತಿಳಿದರೆ ಹುಬ್ಬೇರುವುದರಲ್ಲಿ ಸಂದೇಹವೇ ಇಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net