ಹಮಾಸ್ ದಾಳಿಗೆ ವರ್ಷ..ಮತ್ತೆ ಅಲರ್ಟ್ ಆದ ಇಸ್ರೇಲ್! ಹಲವು ದೇಶಗಳ ಜನ ಬೀದಿಗಿಳಿದಿದ್ದೇಕೆ? | Israel

Israel
Published on

ನವದೆಹಲಿ: ಇಸ್ರೇಲ್(Israel) ಮೇಲೆ ಹಮಾಸ್ ಕ್ಷಿಪಣಿ ದಾಳಿಗೆ ಒಂದು ವರ್ಷವಾಗಿದ್ದು, ಆಗ 1000ಕ್ಕೂ ಹೆಚ್ಚು ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ನಂತರವೇ, ಹಮಾಸ್ ಅನ್ನು ನಾಶಮಾಡಲು ಇಸ್ರೇಲ್ ಪ್ರತಿಜ್ಞೆ ಮಾಡಿತು

ಒಂದು ವರ್ಷದಲ್ಲಿ, ಇಸ್ರೇಲ್ ಹಮಾಸ್ ಮುಖ್ಯಸ್ಥ ಸೇರಿದಂತೆ ಅನೇಕ ಕಮಾಂಡರ್‌ಗಳನ್ನು ಕೊಂದಿದೆ. ಇದುವರೆಗೆ 41ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಹಮಾಸ್ ದಾಳಿಯು ಅ.7ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಇದರಿಂದಾಗಿ ಇಸ್ರೇಲ್ ತನ್ನ ಸೇನೆಗೆ ಕಟ್ಟೆಚ್ಚರ ವಹಿಸಿದೆ. ಅಷ್ಟೇ ಅಲ್ಲ, ಇರಾನ್‌ನ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಜಾಗರೂಕವಾಗಿದೆ. ಪ್ರತೀಕಾರ ತೀರಿಸಲು ಸಿದ್ಧತೆ ನಡೆಸುತ್ತಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೆಬನಾನ್‌ನ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ಇಸ್ರೇಲ್ ಯುದ್ಧದಲ್ಲಿ ಸಿಲುಕಿರುವ ಕಾರಣ ಈ ಎಚ್ಚರಿಕೆಯನ್ನು ನೀಡಲಾಗಿದೆ, ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಯಾವುದೇ ವಿರಾಮವಿಲ್ಲದೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಹಮಾಸ್ ದಾಳಿಗೆ ಪ್ರತಿಕ್ರಿಯಿಸಲು ಹಕ್ಕು ಹೊಂದಿದೆ ಎಂದು ಪ್ರಧಾನಿ ಬೆಂಜಮಿನ್​ನೆತನ್ಯಾಹು ಹೇಳಿದ್ದಾರೆ. ಹೀಗಾಗಿ ಯುದ್ಧದ ಕಾರ್ಮೋಡ ದೂರಾಗುವ ಲಕ್ಷಣ ಇನ್ನೂ ಗೋಚರಿಸುತ್ತಿಲ್ಲ.

2023ರ ಅಕ್ಟೋಬರ್ 7 ರಂದು ಪ್ಯಾಲೇಸ್ತೇನ್​ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1205 ಜನರು ಕೊಲ್ಲಲ್ಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದರು. ಇದೇ ಸಮಯದಲ್ಲಿ ಹಮಾಸ್ ಹೋರಾಟಗಾರರು ಇಸ್ರೇಲ್ ಗಡಿ ಪ್ರವೇಶಿಸಿ ನೂರಾರು ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡರು. ಇಲ್ಲಿಂದ ಹೋರಾಟ ಪ್ರಾರಂಭವಾಯಿತು ಮತ್ತು ಇಸ್ರೇಲ್ ಹಮಾಸ್ ಮೇಲೆ ದಾಳಿ ಮಾಡಿ ಗಾಜಾವನ್ನು ಸಂಪೂರ್ಣವಾಗಿ ನಾಶಪಡಿಸಿತು.

ವಿವಿಧೆಡೆ ಪ್ರತಿಭಟನೆ: Israel

ಹಮಾಸ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಪ್ಯಾಲೆಸ್ತೇನ್ ದಾಳಿಗೆ ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನ ಮೊದಲು, ಗಾಜಾ ಮತ್ತು ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ವಿಶ್ವದಾದ್ಯಂತ ವಿವಿಧ ನಗರಗಳಲ್ಲಿ ಇಸ್ರೇಲ್​ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net