ಹಿಪ್ಪರಗಿ ಬ್ಯಾರೇಜ್ ಗೆ ತಗ್ಗಿದ ಒಳಹರಿವು

bkt-15-12
ಹಿಪ್ಪರಗಿ ಬ್ಯಾರೇಜ್
Published on

ಬಾಗಲಕೋಟೆ: ಕಳೆದ ಹತ್ತು ದಿನಗಳ ಕಾಲ ಅಬ್ಬರಿಸಿದ ಮಳೆರಾಯ ಶನಿವಾರ ಜಿಲ್ಲೆಯಲ್ಲಿ ಸಂಪೂರ್ಣ ಬಿಡುವು ಕೊಟ್ಟಿದ್ದು, ಕಳೆದ ೨೪ ಗಂಟೆಯಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ೨.೦ ಎಂಎಂ ಪೈಕಿ ಕೇವಲ ೦.೩ ಎಂಎಂ ಮಳೆ ಆಗಿದೆ. ಶುಕ್ರವಾರ ಸಂಜೆ ಹುನಗುಂದದಲ್ಲಿ ೬.೫ಎಂಎಂ ಹಾಗೂ ಇಳಕಲ್ಲ ನಗರದಲ್ಲಿ ೭.೫ ಎಂಎಂ ಮಳೆ ಹೊರತುಪಡಿಸಿದರೆ ಬೇರೆ ಕಡೆಗೆ ಮಳೆ ಅಬ್ಬರ ಇಲ್ಲವಾಗಿದೆ.

ಜಿಲ್ಲೆಯಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ಸಹ ಮಳೆ ಆರ್ಭಟ ತಗ್ಗಿದ್ದರಿಂದ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಹರಿವು ಸಹ ಕಡಿಮೆ ಆಗಿದೆ. ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ನಲ್ಲಿ ಶನಿವಾರ ೭೧೮೫ ಕ್ಯೂಸೆಕ್ ಒಳಹರಿವು ಇದ್ದು, ೫೨೦೦ ಕ್ಯೂಸೆಕ್ ಹೊರಹರಿವು ಇತ್ತು. ೬ ಟಿಎಂಸಿ ಸಾಮರ್ಥ್ಯೆದ ಬ್ಯಾರೇಜ್ ನಲ್ಲಿ ೨.೨೮ ಟಿಎಂಸಿ ನೀರು ಸಂಗ್ರಹಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಜೂನ್ ೧ ರಿಂದ ೧೫ ವರೆಗೆ ವಾಡಿಕೆಯಂತೆ ೫೦.೨ ಎಂಎಂ ಮಳೆ ಆಗಬೇಕಿತ್ತು. ಆದರೆ, ಎರಡು ವಾರ ಮಳೆ ಅಬ್ಬರ ಇದ್ದಿದ್ದರಿಂದ ಜೂನ್ ನಲ್ಲಿ ಈ ವರೆಗೂ ಒಟ್ಟು ೧೩೪.೬ ಎಂಎಂ ಮಳೆ ಆಗಿರುವ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net