

ಔರಾದ್: ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ಮುಸ್ಲಿಮರಿಗೆ ಅಂತ್ಯಸAಸ್ಕಾರ ಮಾಡಲು ಸೂಕ್ತ ಸ್ಮಶಾನ ಭೂಮಿ ಇಲ್ಲದಿರುವುದರಿಂದ ತೊಂದರೆ ಆಗುತ್ತಿದ್ದು, ಭೂಮಿ ಮಂಜೂರು ಮಾಡಲು ಆಗ್ರಹಿಸಿ ಗ್ರಾಮದ ಮುಸ್ಲಿಮರು ಸೋಮವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಎರಡು ಗುಂಟೆ ಸ್ಮಶಾನ ಭೂಮಿ ಇದ್ದು, ಈಗಾಗಲೇ ಭರ್ತಿ ಆಗಿದೆ. ಅಂತ್ಯ ಸಂಸ್ಕಾರಕ್ಕೆ ಇದು ಸಾಕಾಗುತ್ತಿಲ್ಲ. ಆದ್ದರಿಂದ ಸರ್ಕಾರಿ ಜಮೀನಿನಲ್ಲಿ ಮುಸ್ಲಿಮರಿಗೆ ಸ್ಮಶಾನ ಭೂಮಿ ನೀಡಬೇಕು ಎಂದು ಆಗ್ರಹಿಸಿದರು. ಗೌಸ್ಪಾಷಾ, ಶಿವರಾಜ, ಜಲೀಲ್ ಸಾಬ್ ಇತರರಿದ್ದರು.