ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಪ್ರತಿಬಂಧಕಾಜ್ಞೆ ಜಾರಿ

dc janki
ಜಾನಕಿ ಕೆ.ಎಂ
Published on

ಬಾಗಲಕೋಟೆ:  ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಜರುಗಲಿರುವ ಪ್ರದೇಶಗಳಲ್ಲಿ ನವೆಂಬರ 23 ರಂದು ಮತದಾನ ದಿನದ ನಿಮಿತ್ಯ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ದಂಡಾಧಿಕಾರಿ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.

ಮತದಾನ ನಡೆಯುವ ಪ್ರದೇಶಗಳಲ್ಲಿ 5 ವ್ಯಕ್ತಿಗಳಿಗಿಂತ ಹೆಚ್ಚಿನ ಜನರು ಜೊತೆಗೂಡಿ, ಗುಂಪಾಗಿ ಸಂಚಿರಿಸುವಂತಿಲ್ಲ. ಸಾರ್ವಜನಿಕ ಸಭೆ ನಡೆಸುವುದು, ಶಾಂತತೆಗೆ ಭಂಗ ಉಂಟು ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವುದು ಹಾಗೂ ಅಹಿತಕರ ಘಟನೆ ನಡೆಯದಂತೆ ಮತದಾನ ಕೇಂದ್ರದ ಸುತ್ತಮುತ್ತ 100 ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಶಸ್ತ್ರಾಸ್ತ್ರಗಳ ಜಮೆಗೆ ಸೂಚನೆ

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಚುನಾವಣೆ ನಡೆಯುವ ಇಳಕಲ್ಲ ನಗರಸಭೆ ಹಾಗೂ ಬೀಳಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಲೈಸನ್ಸ್ ದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದುಗುಂಡುಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಿ ಸೂಕ್ತ ರಶೀದಿ ಪಡೆಯತಕ್ಕದ್ದು. ನವೆಂಬರ 26ರ ನಂತರ ವಾಪಸ ಪಡೆಯುವಂತೆ ಆದೇಶ ಹೊರಡಿಸಿದ್ದಾರೆ.

ಮದ್ಯ ಮಾರಾಟ, ಸಾಗಾಣಿಕೆ ನಿಷೇಧ

ನವೆಂಬರ 23 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ನಿಮಿತ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ನವೆಂಬರ 21 ರಾತ್ರಿ 12 ಗಂಟೆಯಿಂದ ನವೆಂಬರ 23 ರ ರಾತ್ರಿ 12 ಗಂಟೆವರೆಗೆ ಇಳಕಲ್ಲ ನಗರಸಭೆ ಹಾಗೂ ಬೀಳಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬೀರ, ಬ್ರ್ಯಾಂಡಿ ಹಾಗೂ ಐ.ಎಂ.ಎಲ್ ಲಿಕ್ಕರ ಮಾರಾಟ ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಿದ್ದಾರೆ.

ಸಂತೆ, ಜಾತ್ರೆ, ಉತ್ಸವ ನಿಷೇಧ

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಹಿನ್ನಲೆಯಲ್ಲಿ ನವೆಂಬರ 23 ರಂದು ನಡೆಯುವ ಇಳಕಲ್ಲ ನಗರಸಭೆ ಹಾಗೂ ಬೀಳಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಂತೆ, ಜಾತ್ರೆ, ದನಗಳ ಜಾತ್ರ, ಉತ್ಸವ ಇತ್ಯಾದಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net