ಶಾಲೆಗಳು ಲಾರ್ವಾ, ಸೊಳ್ಳೆ ಮುಕ್ತವಾಗಲಿ

Health
Published on

ಚಿತ್ರದುರ್ಗ: ಲಾರ್ವಾ ಮತ್ತು ಸೊಳ್ಳೆ ಮುಕ್ತ ಶಾಲೆ ಸಮುದಾಯಕ್ಕೆ ಆದರ್ಶನೀಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ಹೇಳಿದರು.

ಗುಮಾಸ್ತರ ಕಾಲಾನಿಯ ಶರಣ ಬಸವೇಶ್ವರ ಶಾಲೆಯಲ್ಲಿ ಮಾರುತಿ ನಗರದ ನಗರ ಆರೋಗ್ಯ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಲಾರ್ವಾ ಮುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೀಟಜನ್ಯ ರೋಗಗಳು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಮುಂಗಾರು ಆರಂಭದಲ್ಲಿ ಶಾಲೆಯ ಸುತಮುತ್ತ ಪರಿಸರ ಸ್ನೇಹಿ ವಾತಾವರಣ ಇರಲಿ ಎಂದು ಸಲಹೆ ನೀಡಿದರು.

ಶಾಲೆಗಳ ಆವರಣದಲ್ಲಿ ಫನತ್ಯಾಜ್ಯ ವಸ್ತುಗಳನ್ನು ಬಿಸಾಡದೆ, ಎಲ್ಲ ಕೊಠಡಿಯಲ್ಲೂ ಸ್ವಚ್ಛತೆ ಕಾಪಾಡಲು ವಿದ್ಯಾರ್ಥಿಗಳು ಮುಂದಾಗಬೇಕು. ಈ ಕುರಿತು ಶಿಕ್ಷಕರು ಗಮನಹರಿಸಬೇಕು ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಯೋಗೇಶ್ವರಪ್ಪ, ರುದ್ರಮುನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ರೂಪಾ, ಪವಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net