ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯಕ್ಕೆ ಸಿಂಡಿಕೇಟ್ ಪ್ರಾಧಿಕಾರಕ್ಕೆ ಮೂರು ವರ್ಷದವರೆಗೆ ಅಥವಾ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ನಾಮ ನಿರ್ದೇಶನ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಶಶಿಕಲಾ ಸಿ., ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗದ ಡಾ.ಜಯಲಕ್ಷ್ಮಿ ನಾಯಕ್, ಶಿವಮೊಗ್ಗದ ಅರ್ಥೊಬ ನಾಯಕ, ವಿಜಯನಗರದ ಪಿ. ಪೀರ್ ಬಾಷಾ, ಬಳ್ಳಾರಿಯ ಕೆ. ಶಿವಕುಮಾರ್, ರಾಯಚೂರಿನ ಡಾ.ಅಮರೇಶ ನುಗಡೋಣಿ, ಬೆಂಗಳೂರಿನ ಚ.ಹ. ರಘುನಾಥ್ ಅವರನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರ ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಮೊದಲು ಜಿಲ್ಲೆಯ ಸ್ಥಳೀಯರಿಗೆ ಮಾನ್ಯತೆ ನೀಡಬೇಕು. ಆದರೆ, ಬೇರೆ ಜಿಲ್ಲೆಯ ಮೂವರನ್ನು ನೇಮಕ ಮಾಡಿರುವುದು ಆಶ್ಚರ್ಯ ತಂದಿದೆ. ವಿವಿ ಯ ಅಭಿವೃದ್ಧಿ ಗೆ ಸ್ಥಳೀಯವರಿಗೆ ಇರುವಷ್ಟು ಕಾಳಜಿ ಬೇರೆ ಜಿಲ್ಲೆಯವರಿಗೆ ಇರುವುದಿಲ್ಲ ಎಂದು ಸಿಂಡಿಕೇಟ್ ಮಾಜಿ ಸದಸ್ಯರೊಬ್ಬರು ಅಭಿಪ್ರಾಯ ಪಟ್ಟರು.