ವನ್ಯಮೃಗ ದಾಳಿಗೆ ಎರಡು ಹಸು ಬಲಿ

Published on

ಚಾಮರಾಜನಗರ: ತಾಲೂಕಿನ ಗೋವಿಂದವಾಡಿ(ಕಲ್ಪುರ) ಗ್ರಾಮದಲ್ಲಿ ವನ್ಯಮೃಗದ ದಾಳಿಗೆ ಎರಡು ಹಸುಗಳು ಬಲಿಯಾಗಿವೆ. ಗ್ರಾಮದ ರೈತ ಕುಮಾರ್ ಸಾಕಿದ್ದ ಎರಡು ಹಸುಗಳು ಮೃತಪಟ್ಟಿವೆ. ದಾಳಿ ಮಾಡಿರುವ ವನ್ಯಮೃಗ ಹುಲಿ ಎಂದು ರೈತರು ಹೇಳುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಚಿರತೆ ಎನ್ನುತ್ತಿದ್ದಾರೆ.

ಶನಿವಾರ ಮಧ್ಯಾಹ್ನ ಜಮೀನಿನಲ್ಲಿ ಮೇವು ಮೇಯುತ್ತಿದ್ದ ವೇಳೆ ವನ್ಯಮೃಗ ದಾಳಿ ಮಾಡಿದೆ. ಪರಿಣಾಮ ಎರಡು ಹಸುಗಳು ಮೃತಪಟ್ಟಿವೆ. ಕೂಡಲೆ ಜಾನುವಾರುಗಳ ಬಲಿ ಪಡೆದಿರುವ ವನ್ಯಜೀವಿಯನ್ನು ಸೆರೆ ಹಿಡಿಯಬೇಕು. ರೈತ ಕುಮಾರ್‌ಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net