ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

10 YLP 02
Published on

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬುಧವಾರ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ಪಟ್ಟಣದ ಜೋಡುಕೆರೆ ಬಳಿ ಸಂಭವಿಸಿದೆ. ಲಾಲಗುಳಿಯ ಸುಕುಮಾರ ಮಾಣಕು ಸಿದ್ದಿ (43) ಮೃತಪಟ್ಟ ಸವಾರ. ಹಿಂಬದಿಯ ಸವಾರ ಬರ್ನಾಬ ಬಾಬು ಸಿದ್ದಿ ಗಾಯಗೊಂಡಿದ್ದಾರೆ.

ಬೈಕ್​ಗೆ ಪೆಟ್ರೊಲ್ ಹಾಕಿಸಲೆಂದು ರಸ್ತೆ ದಾಟುವ ವೇಳೆ ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆಗೆ ಸಾಗುವಾಗ ಲಾರಿ ಡಿಕ್ಕಿ ಹೊಡೆದಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸುಕುಮಾರ ಮೃತಪಟ್ಟಿದ್ದು, ಇನ್ನೊಬ್ಬ ಗಾಯಾಳು ಬರ್ನಾಬಗೆ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕ ಕೇರಳದ ಸಫೀರ ಸಲೀಂ ಕೆ., ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net