

ಕಡಬ: ಕೈೊಲ, ರಾಮಕುಂಜ ಭಾಗದ ಜನರನ್ನು ನಿರಂತರ ಕಾಡುತ್ತಿದ್ದ ವಿದ್ಯುತ್ ಕಡಿತ, ವೋಲ್ಟೇಜ್ ಸಮಸ್ಯೆ ನಿವಾರಣೆಗೆ ಕಾಲ ಕೂಡಿ ಬಂದಿದೆ.. 33 ಕೆವಿ ಉಪಕೇಂದ್ರ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಈ ಭಾಗದ ವಿದ್ಯುತ್ ಬಳಕೆದಾರರ ಬಹುಕಾಲದ ಬೇಡಿಕೆಯೊಂದು ಈಡೇರುವಂತಿದೆ.
ಕೈೊಲದಲ್ಲಿ ರಾಜ್ಯ ಹೆದ್ದಾರಿ ಮಗ್ಗುಲಲ್ಲಿ ಪಶುಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಂಚಿನಲ್ಲಿ 1 ಎಕರೆ ಜಾಗ ಮೆಸ್ಕಾಂ ಇಲಾಖೆಗೆ ಮಂಜೂರು ಆಗಿದ್ದು, 33 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣ ಆಗಲಿದೆ.
ಉಪ್ಪಿನಂಗಡಿ ಸಮೀಪದ ಕರ‌್ವೇಲ್‌ನ 110 ಕೆವಿ ಉಪಕೇಂದ್ರದಿಂದ 33 ಕೆವಿ ವಿದ್ಯುತ್ ಕೈೊಲಕ್ಕೆ ಬರಲಿದೆ. ಕೈೊಲ ಉಪಕೇಂದ್ರದಿಂದ ಕೊಲ, ರಾಮಕುಂಜ, ಹಳೆನೇರೆಂಕಿ, ಹಿರೇಬಂಡಾಡಿ, ಬಜತ್ತೂರು ಈ 5 ಗ್ರಾಮ ವ್ಯಾಪ್ತಿಗೆ ಒಟ್ಟು 11 ಕೆವಿ ಹಂಚಿಕೆಯಾಗಲಿದೆ. ಈ ರೀತಿಯಾಗಿ ಕೈೊಲ, ರಾಮಕುಂಜ ಭಾಗದ ಬಳಕೆದಾರರಿಗೆ ಗುಣಮಟ್ಟದ ವಿದ್ಯುತ್ ದೊರಕುವ ಆಶಾಭಾವನೆ ವ್ಯಕ್ತವಾಗಿದೆ.
ಕೈೊಲ ಭಾಗಕ್ಕೆ ಪುತ್ತೂರಿನಿಂದ ಬೆಳಿಪ್ಪಾಡಿ ಮೂಲಕ ಕಾಡು ಹಾದಿಯಾಗಿ ನದಿಯನ್ನು ದಾಟಿ ವಿದ್ಯುತ್ ಸಂಪರ್ಕದ ಲೈನ್ ಬರುತ್ತಿದ್ದು, ಮಳೆಗಾಲದಲ್ಲಿ ಮರದ ರೆಂಬೆ, ಕೊಂಬೆ ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತ, ಬೇಸಿಗೆಯಲ್ಲಿ ಲೋ ವೋಲ್ಟೇಜ್ ಸಮಸ್ಯೆ ಮೊದಲಾದ ಕಾರಣಗಳಿಂದ 365 ದಿನಗಳೂ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿತ್ತು. ಉಪಕೇಂದ್ರ ನಿರ್ಮಾಣದಿಂದ ಸಮಸ್ಯೆ ಬಗೆಹರಿಯಲಿದೆ ಎಂಬ ಆಶಾಭಾವ ಈ ಭಾಗದ ಜನರಲ್ಲಿ ಮೂಡಿದೆ.
ಸಬ್‌ಸ್ಟೇಷನ್ ಕಾಮಗಾರಿಗೆ ರಾಜ್ಯ ಸರ್ಕಾರದಿಂದ 13.11 ಕೋಟಿ ರೂಪಾಯಿ ಮಂಜೂರು ಆಗಿದೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಬೆಂಗಳೂರು ಇಟಾ ಇಂಜಿನಿಯರ್ಸ್ ಬೆಂಗಳೂರು ಸಂಸ್ಥೆ ಕಾಮಗಾರಿ ನಿರ್ವಹಣೆ ವಹಿಸಿಕೊಂಡಿದೆ.
ಕೈೊಲ ಪರಿಸರದ ವಿದ್ಯುತ್ ಸಮಸ್ಯೆ ನಿವಾರಣೆಗೆ ಉಪಕೇಂದ್ರ ಹೊರತಾಗಿ ಬೇರೆ ಪರ‌್ಯಾಯ ಮಾರ್ಗ ಇರಲಿಲ್ಲ. ಉಪಕೇಂದ್ರ ನಿರ್ಮಿಸಲು 2021ರಿಂದ ಜಾಗ ಹುಡುಕಲಾರಂಭಿಸಿತ್ತು. 2024ರಲ್ಲಿ ಜಾಗ ಮಂಜೂರು ಆಗಿತ್ತು. ಆ ಬಳಿಕ ಆದ್ಯತೆಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ವರ್ಷಾಂತ್ಯಕ್ಕೆ ಲೋಕಾರ್ಪಣೆ ಮಾಡಲು ಪ್ರಯತ್ನಿಸಲಾಗುವುದು. ರಾಮಚಂದ್ರ ಎ., ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ, ಪುತ್ತೂರು ಉಪ ವಿಭಾಗ https://www.vijayavani.net/sci-swachh-ganga-programme https://www.vijayavani.net/2-lakhs-assistance-to-kombaru-temple