ರೈತರು, ದೇವಾಲಯ, ಮಠಗಳ ಆಸ್ತಿ ವಕ್ಫ್ ಬೋರ್ಡ್ಗೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ / ಸಚಿವ ಜಮೀರ್ ಅಹಮದ್ ನಡೆ ಪಾಕ್ ಏಜೆಂಟರAತಿದೆ / ಮಾಜಿ ಸಂಸದ ಮುನಿಸ್ವಾಮಿ ಆರೋಪ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರರ್ಕಾವು ಆರಂಭದಿAದಲೂ ಒಂದಲ್ಲಾ ಒಂದು ಹಗರಣಗಳನ್ನು ಮಾಡಿಕೊಂಡು ಬರುತ್ತಿದೆ. ಇದರ ಜತೆಗೆ ರೈತರು, ದೇವಾಲಯ, ಮಠಗಳ ಆಸ್ತಿಗಳನ್ನು ವಕ್ಫ್ ಬೋರ್ಡ್ಗೆ ನೀಡುತ್ತಿರುವುದನ್ನು ಖಂಡಿಸಿ ನ.೪ರ ಸೋಮವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕರು ಭಾಗವಹಿಸುತ್ತಿದ್ದು, ಪಕ್ಷಾತೀತವಾಗಿ ಎಲ್ಲ ಸಂಘಟನೆಗಳೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಪಾಕಿಸ್ತಾನ್ ಏಜೆಂಟರAತೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಜಿಲ್ಲೆಗಳಿಗೆ ಭೇಟಿ ನೀಡಿ ಮಠಮಾನ್ಯಗಳು, ರೈತರು, ದೇವಾಲಯಗಳ ಜಮೀನನ್ನು ಬೋರ್ಡ್ಗೆ ಸೇರಿಸಲು ಮುಂದಾಗುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪಾಕಿಸ್ತಾನ ದೇಶದ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುವ ಜಮೀರ್ ಅಹಮದ್ ಖಾನ್ ತಮ್ಮ ಬಸ್ಸುಗಳನ್ನು ಪಾಕಿಸ್ತಾನಕ್ಕೂ ಕಳುಹಿಸಿದ್ದಾರೆ. ಮುಂದೆ ಒಂದು ದಿನ ಎಂದಾದರೂ ನನ್ನನ್ನು ದೇಶದಿಂದ ಗಡಿಪಾರು ಮಾಡಲಾಗುತ್ತದೆ ಎನ್ನುವುದನ್ನು ಅರಿತಿರುವ ಅವರು ಮುಂಜಾಗ್ರತೆಯಾಗಿ ವಕ್ಫ್ ಖಾತೆಯನ್ನು ಪಡೆದಿದ್ದಾರೆ ಎಂದು ಲೇವಡಿ ಮಾಡಿದರು.

ಇನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಜಮೀರ್ ಅಹಮದ್ ಖಾನ್ ಸಹೋದರ. ಕೋಲಾರ ಜಿಲ್ಲೆಯಲ್ಲಿಯೂ ಅನೇಕ ಜಾಗಗಳನ್ನು ವಕ್ಫ್ಗೆ ನೀಡಲಾಗಿದೆ. ಸಂಗೊAಡಹಳ್ಳಿ ಹಾಗೂ ಅಂತರಗAಗೆ ದೇವಾಲಯಗಳ ಬಳಿ. ಕುಡಿಯನೂರಿನ ಸ್ಮಶಾನ, ಲಕ್ಕೂರು ಆಂಜನೇಯಸ್ವಾಮಿ ದೇವಾಲಯದ ಜಾಗ, ಮುಳಬಾಗಲು ಬೆಟ್ಟದ ಕೆಳಗಿನ ಜಾಗದಲ್ಲಿ ಒಂದು ಸಮುದಾಯದವರಿಗೆ ನಿವೇಶನಗಳನ್ನು ನೀಡಲಾಗುತ್ತಿರುವುದು ಎಷ್ಟು ವಿಪರ್ಯಾಸ ಎಂದು ಪ್ರಶ್ನಿಸಿದರು.

ರೈತರ ಜಮೀನುಗಳನ್ನು ರಾತ್ರೋರಾತ್ರಿ ವಕ್ಫ್ಗೆ ಸೇರ್ಪಡೆ ಮಾಡಲು ಮುಂದಾಗಿದ್ದು, ಆ ಜಮೀನುಗಳು ಜಮೀರ್ ಅಹಮದ್ ಖಾನ್ ಅವರ ಅಪ್ಪನ ಆಸ್ತೀನಾ ಅಥವಾ ಅವರೇನು ಪಾಕಿಸ್ತಾನದವರಾ ಬೇರೆ ಸಮುದಾಯದವರು ನಿಮಗೆ ಮತ ಹಾಕಿಲ್ಲವೇ ? ಬಡ ಮುಸಲ್ಮಾನರಿಗೆ ಎಂದಾದರೂ ನಿವೇಶನ, ಮನೆ ನೀಡಿದ್ದೀರಾ ಎಂದು ಪ್ರಶ್ನಿಸಿ ಕೂಡಲೇ ಸಚಿವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ನೀಡಿರುವ ನೋಟೀಸ್‌ಗಳನ್ನು ವಾಪಸ್ ಪಡೆಯುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಂದಾಯ ಸಚಿವರೇ ನೋಟೀಸ್ ವಾಪಸ್ ಪಡೆಯುವುದಲ್ಲ ತಿದ್ದುಪಡಿಯಾಗಿರುವ ದಾಖಲೆಗಳನ್ನು ಸರಿಪಡಿಸಲು ಮುಂದಾಗಿ ಎಂದು ಸಲಹೆ ನೀಡಿದರು.

ಡಿಸೆಂಬರ್ ನಲ್ಲಿ ವಕ್ಫ್ಬೋರ್ಡ್ ಕಾಯಿದೆ ತಿದ್ದುಪಡಿಯಾಗಿ ಎಲ್ಲರಿಗೂ ನ್ಯಾಯ ಸಿಗಲಿದೆ. ಅಲ್ಲದೆ ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಿಮ್ಮ ತಪ್ಪುಗಳನ್ನು ಸರಿಪಡಿಸುತ್ತೇವೆ. ರೈತರು ನಿಮ್ಮ ಕಂದಾಯ ದಾಖಲೆಗಳನ್ನು ಪರಿಶೀಲಿಸುವ ಜೊತೆಗೆ ನಮ್ಮ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಸುಳ್ಳು ಗ್ಯಾರೆಂಟಿಗಳನ್ನು ಹೇಳಿ ಅಧಿಕಾರಕ್ಕೆ ಬಂದವರು ಇದೀಗ ಗ್ಯಾರೆಂಟಿ ಯೋಜನೆ ಕುರಿತು ಬೇರೆ ರೀತಿಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಎಐಸಿಸಿ ಅಧ್ಯಕ್ಷ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರೆಂಟಿ ಸೌಲಭ್ಯಗಳು ಸಮರ್ಪಕವಾಗಿ ಸಿಗದಿರುವ ಕಾರಣ ಜಮ್ಮು ಕಾಶ್ಮೀರದಲ್ಲಿ ಜನರು ಗ್ಯಾರೆಂಟಿಗಳಿಗೆ ಛೀಮಾರಿ ಹಾಕಿದ್ದಾರೆ. ಇಂತಹವರು ಮೋದಿಯ ಬಗ್ಗೆ ಮಾತನಾಡುವುದು ಸರಿಯಲ್ಲ.

ಭ್ರಷ್ಟ ಸಿದ್ದರಾಮಯ್ಯರ ಸರ್ಟಿಫಿಕೇಟ್ ಮೋದಿಗೆ ಬೇಕಿಲ್ಲ. ದೇಶದ ಜನರ ಸರ್ಟಿಫಿಕೇಟ್ ಸಾಕು ಎಂದರು.

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರದ್ದು ಏನೂ ನಡೆಯುವುದಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ೧೫೦ ಜನ ಇಲ್ಲ, ಇಎಸ್ ಐ ಆಸ್ಪತ್ರೆ ಶಂಕುಸ್ಥಾಪನೆಗೆ ೩೦ ಮಂದಿ ಇಲ್ಲ. ಒಂದು ಸಮುದಾಯದವರಿಗೆ ಅನುಕೂಲವಾಗುವುದಾದರೆ ಜನರು ಇರುತ್ತಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಕೆಂಬೋಡಿ, ಚದ್ರಶೇಖರ್, ರಾಜೇಶ್ ಮುಂತಾದವರಿದ್ದರು.

ಚಿತ್ರ ೦೩ ಕೆ.ಎಲ್.ಆರ್. ೦೬ : ಕೋಲಾರದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಸುದ್ದಿಗೋಷ್ಟಿ ನಡೆಸಿ ನ.೪ ರಂದು ನಡೆಸುವ ಪ್ರತಿಭಟನೆ ಕುರಿತು ಮಾಹಿತಿ ನೀಡಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net