ರೈತರು ಜೀವನದ ಉಸಿರಾಗಿಸಿಕೊಂಡ ದಾಸೋಹ

klb3
ಚಿಂಚೋಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಕ್ತರು ಡಾ.ಶ್ರೀ ಚನ್ನವೀರ ಶಿವಾಚಾರ್ಯರ ಪಾದಪೂಜೆ ನೆರವೇರಿಸಿದರು. ನಾಗರಾಜ ಕಲಬುರಗಿ, ಚನ್ನಬಸಯ್ಯ ಹಿರೇಮಠ, ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಸಂತೋಷ ಕಡಂತಿ, ಅಪ್ಪಣ್ಣ ಹಾರಕೂಡ ಇತರರಿದ್ದರು.
Published on

ಚಿಂಚೋಳಿ: ರೈತರು ಬೆಳೆದ ಬೆಳೆಯಲ್ಲಿ ಒಂದಿಷ್ಟು ದಾನ ಮಾಡುವ ಮೂಲಕ ದಾಸೋಹವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ ಎಂದು ಹಾರಕೂಡ ಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಪಟ್ಟಣದ ಹಾರಕೂಡ ಮಠದಲ್ಲಿ ಭಾನುವಾರ ಭಕ್ತರು ಹಮ್ಮಿಕೊಂಡ ಗುರುಪೂರ್ಣಿಮಾ ಮಹೋತ್ಸವದ ಪಾದಪೂಜೆ ನಂತರ ಆಶೀರ್ವಚನ ನೀಡಿದ ಶ್ರೀಗಳು, ಎಂಥ ಕಷ್ಟದಲ್ಲೂ ಬೆಳೆದರೂ ಅದರಲ್ಲಿ ಒಂದು ಶೇರಾದರೂ ದಾಸೋಹ ಮಾಡುವ ಗುಣ ನಮ್ಮ ರೈತರಲ್ಲಿದೆ ಎಂದರು. ಯಾವುದೇ ಕಾರಣಕ್ಕೂ ರೈತರು ಕಷ್ಟ ಇದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಹೋಗಬಾರದು. ನಿಮ್ಮ ಕಷ್ಟ ಸದ್ಗುರು ಚನ್ನಬಸವನ ಜೋಳಿಗೆಗೆ ಹಾಕಿ ಅವರನ್ನು ಧ್ಯಾನಿಸಿದರೆ ಕಷ್ಟಗಳೆಲ್ಲ ದೂರಾಗುತ್ತವೆ. ಅಲ್ಲದೆ ಶ್ರೀಮಠದ ಪ್ರತಿ ಭಕ್ತರು ವಿನಯದಿಂದ ಕೂಡಿರಬೇಕು. ನಿಮ್ಮಲ್ಲಿನ ವಿನಯದಿಂದ ವಿವೇಕ ವೃದ್ಧಿಸುವುದರ ಜತೆಗೆ ವಿವೇಕದಿಂದ ಗೌರವ ಪ್ರಾಪ್ತಿಯಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿ ಐನಾಪುರ ಮಾತನಾಡಿದರು. ಕಲಬುರಗಿಯ ಗುರುಕೃಪಾ ಬುಕ್‍ಸ್ಟಾಲ್ ಮಾಲೀಕ ಜಯಣ್ಣ ಢೋಲೆ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶಿವಕುಮಾರ ದೇಶಮುಖ, ಬಸವರಾಜ ಬೀರನಳ್ಳಿ, ಭೀಮರಾವ ಸೇಡಂ, ಚನ್ನಬಸಪ್ಪ ಮೀನಹಾಬಾಳ, ಚನ್ನಬಸಯ್ಯ ಹಿರೇಮಠ, ನಾಗರಾಜ ಕಲಬುರಗಿ, ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಸಂತೋಷ ಕಡಂತಿ, ವೀರುಪಾಕ್ಷಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ವೀರಶೆಟ್ಟಿ ಅಂಬಲಗಿ, ಕಾಶೀನಾಥ ಹಿರೇಮಠ, ಡಾ.ಸಂಗಮೇಶ ಮಂಡಿ, ಸೂರ್ಯಕಾಂತ ಸಂಗೊಳಗಿ, ವಿಜಯಕುಮಾರ ಸಂಗೊಳಗಿ, ಚನ್ನಬಸಪ್ಪ ತೋಟಪ, ಪಂಡಿತ ದೇಗಾಂವ್, ಅಪ್ಪಣ್ಣ ಜನವಾಡ, ರಾಜಕುಮಾರ ದೇಗಾಂವ್, ಶಾಮರಾವ ಕೋರವಾರ ಅಪ್ಪಣ್ಣ ಮಾಸ್ತಾರ್, ಕಲಶೆಟ್ಟಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net