ರಸ್ತೆ ಸೌಕರ್ಯಕ್ಕೆ 40 ಕೋಟಿ ರೂ.

1
Published on

ಮುನವಳ್ಳಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಕಾರದಿಂದ ಸವದತ್ತಿ ಯಲ್ಲಮ್ಮ ಮತೇತ್ರದ ರಾಜ್ಯ ರಸ್ತೆ ಅಭಿವೃದ್ಧಿಗೆ ಒಟ್ಟು 40 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಶಿಂದೋಗಿ ಕ್ರಾಸ್​ ಬಳಿ ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 40 ಕೋಟಿ ರೂ. ವೆಚ್ಚದ ರಾಜ್ಯ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಿಂದೋಗಿ ಕ್ರಾಸ್​ದಿಂದ ಸವದತ್ತಿ ರಸ್ತೆಯ ರಾಮದುರ್ಗ ಕ್ರಾಸ್​ವರೆಗೆ 19. ಕೋಟಿ ರೂ., ಯರಝರ್ವಿ ಕ್ರಾಸ್​ದಿಂದ ಯರಝರ್ವಿ, ಕಡಬಿ, ಶಿವಾಪುರವರೆಗೆ 15 ಕೋಟಿ ರೂ. ಹಾಗೂ ಯಲ್ಲಮ್ಮನಗುಡ್ಡದಿಂದ ಹಂಚಿನಾಳ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ 6.ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಮಲಪ್ರಭಾ ಜಲಾಶಯದ ಬಲದಂಡೆ ಕಾಲುವೆ ಭಾಗದಲ್ಲಿ ತಾಲೂಕಿನ ಶಿಂದೋಗಿ, ಹಿರೂರ, ಹಳ್ಳೂರ, ಜಕಬಾಳ, ಭಂಡಾರಹಳ್ಳಿ, ತೆರೆದಕೊಪ್ಪ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ಪೂರೆಸುವ ಸೆಪನ್​ ದುರಸ್ತಿ ಕಾರ್ಯಕ್ಕೆ19.50 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಸರ್ಕಾರದ ಅನುಮೋದನೆ ನಂತರ ಶ್ರೀದಲ್ಲಿ ಟೆಂಡರ್​ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಸೋಮಶೇಖರಮಠದ ಮುರುಂದ್ರ ಶ್ರೀಗಳು, ವೇದಮೂರ್ತಿ ಈರಯ್ಯ ಹಿರೇಮಠ, ಕಾಂಗ್ರೆಸ್​ ಹಿರಿಯ ಮುಖಂಡರಾದ ರವೀಂದ್ರ ಯಲಿಗಾರ, ಉಮೇಶ ಬಾಳಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಡಿ.ಡಿ. ಟೋಪೋಜಿ. ಗಜಾನನ ಕಲಾಲ, ಕೀರಪ್ಪ ಚಂದರಗಿ, ನಾಗಪ್ಪ ಹಟ್ಟಿ, ವಾಸು ಟೋಪೋಜಿ, ಜ್ಞಾನೇಶ ಬನ್ನೂರ, ಮುತ್ತಪ್ಪ ಮುಶೆನ್ನವರ, ರಾಜು ತೊರಗಲ್ಲ, ಅಲ್ಲಿಸಾಬ್​ ಮಿರ್ಜಿ, ಪಿಡಿಒ ರಮೇಶ ಬೆಡಸೂರ, ಎಇಇ ವಿಜಯ ಸಂಗಪ್ಪಗೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net