ಯುಜಿಸಿ ಕರಡು ಶಿಕ್ಷಣ ವಿರೋಧಿ: ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕಿಡಿ

AIDSO
AIDSO LOGO
Published on

ಮೈಸೂರು: ಇತ್ತೀಚೆಗೆ ರೂಪಿಸಲಾಗಿರುವ ಯುಜಿಸಿ-2025 ಕರಡು ನಿಯಮಾವಳಿಗಳು ಶಿಕ್ಷಣ ವಿರೋಧಿ, ಜನವಿರೋಧಿ ಹಾಗೂ ಅಪ್ರಜಾತಾಂತ್ರಿಕವಾಗಿದೆ ಎಂದು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕಿಡಿಕಾರಿದೆ.

ಈ ಕರಡಿನ ಅಪಾಯಗಳ ಕುರಿತು ದೇಶವ್ಯಾಪಿ ಚರ್ಚೆಗಳನ್ನು ನಡೆಸಿ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಹಾಗೂ ಶಿಕ್ಷಣ ಪ್ರೇಮಿ, ಜನತೆಯ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಇವುಗಳನ್ನು ಕ್ರೋಡೀಕರಿಸಿ ಯುಜಿಸಿಗೆ ಸಲಹೆಗಳ ರೂಪದಲ್ಲಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಶಿಕ್ಷಣ ಕ್ಷೇತ್ರದ ಹೊರಗಿನವರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಮಾಡುವ ಅಪಾಯಕಾರಿ ನಿಯಮಗಳನ್ನು ಯುಜಿಸಿಯು ರೂಪಿಸಿದೆ. ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ.

ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಪ್ರಜಾತಾಂತ್ರಿಕ ಹಕ್ಕನ್ನು ಕಸಿದು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರದ, ಕೇವಲ ಲಾಭ-ನಷ್ಟದ ಲೆಕ್ಕಾಚಾರ ಮಾಡಬಲ್ಲ ಉದ್ಯಮಿಗಳು, ಅಧಿಕಾರಗಳು ಮತ್ತು ಸರ್ಕಾರದ ಹೌದಪ್ಪಗಳ ಕೈಯಲ್ಲಿ ವಿಶ್ವವಿದ್ಯಾಲಯದ ಆಡಳಿತವನ್ನು ಒಪ್ಪಿಸುವ ಹುನ್ನಾರ ಇದಾಗಿದೆ ಎಂದು ದೂರಿದ್ದಾರೆ.

ಸರ್ಕಾರದ ಈ ಅಪ್ರಜಾತಾಂತ್ರಿಕ ಮತ್ತು ಕಡು ಶಿಕ್ಷಣ ವಿರೋಧಿ ನಡೆಯನ್ನು ಖಂಡನೀಯ. ಎಂ.ಇ ಅಥವಾ ಎಂ.ಟೆಕ್‌ನಲ್ಲಿ ಕನಿಷ್ಠ ಶೇ. 55ಅಂಕ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡುವ ನಿಯಮವನ್ನು ಕೂಡ ಕರಡಿನಲ್ಲಿ ಸೂಚಿಸಲಾಗಿದೆ. ಯುಜಿಯು ಕೂಡಲೇ ಈ ಅಪ್ರಜಾತಾಂತ್ರಿಕ ಕರಡನ್ನು ಹಿಂಪಡೆಯಬೇಕು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net