ಮೆದೇಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾವ್ಯವಿಜಯಕುಮಾರ್ ಅವಿರೋಧ ಆಯ್ಕೆ

CTD MEDEHALLI GP-----
Published on

ಚಿತ್ರದುರ್ಗ: ತಾಲೂಕಿನ ಮೆದೇಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾವ್ಯ ವಿಜಯಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಮುಂದಿನ 13 ತಿಂಗಳ ಅವಧಿಗೆ ಗ್ರಾಪಂ ಕಚೇರಿಯಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಭ್ಯರ್ಥಿಗಳಾಗಿ ಕಾವ್ಯ ವಿಜಯಕುಮಾರ್ ಹಾಗೂ ನಿರಂಜನಮೂರ್ತಿ ನಾಮಪತ್ರ ಸಲ್ಲಿಸಿದ್ದರು.

ನಿರಂಜನಮೂರ್ತಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಾವ್ಯವಿಜಯಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಡಾ. ನಾಗವೇಣಿ ಘೋಷಿಸಿದರು.

21 ಸದಸ್ಯ ಬಲದ ಗ್ರಾಪಂನಲ್ಲಿ ಕಾವ್ಯವಿಜಯಕುಮಾರ್ ಅವರಿಗೆ ಉಪಾಧ್ಯಕ್ಷೆ ಲೀಲಾವತಿ ಸದಸ್ಯರಾದ ದುಗ್ಗಪ್ಪ, ಮಮತಾ, ಶ್ರುತಿ ವಿಜಯಕುಮಾರ್, ಭಾಗ್ಯಮ್ಮ, ನಿಂಗಪ್ಪ, ಧನ್ಯಕುಮಾರ್, ಪ್ರಿಯದರ್ಶಿನಿ, ಸುಶೀಲಮ್ಮ, ಕಮಲಮ್ಮ ಶ್ರೀನಿವಾಸ್, ಲಕ್ಷ್ಮೀದೇವಿ, ಗೌರಮ್ಮ ಹಾಗೂ ಶ್ರೀನಿವಾಸ್ ಬೆಂಬಲ ಸೂಚಿಸಿದರು.

ಪಿಡಿಒ ಆರ್. ಪಾತಣ್ಣ, ಜಿಪಂ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಆರ್. ವಿಜಯಕುಮಾರ್, ಮಾಜಿ ಸದಸ್ಯ ಮಂಜುನಾಥ್, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ. ಮಂಜುನಾಥ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ವಿ. ದಿನೇಶ್, ಅನೀಸ್, ಸೈಯದ್ ಖುದ್ದೂಸ್, ಪ್ರಕಾಶ್ ರಾಮಾನಾಯ್ಕ, ದ್ಯಾಮಣ್ಣ, ರಮೇಶ್, ಮಾರೇಶ್, ತಿಪ್ಪೇಸ್ವಾಮಿ, ನಾಗರಾಜ್, ಶಾಂತಕುಮಾರ್ ಮತ್ತಿತರರು ನೂತನ ಅಧ್ಯಕ್ಷರನ್ನು ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net