ಮೂಢನಂಬಿಕೆ ತ್ಯಜಿಸಲು ವೈದ್ಯಾಧಿಕಾರಿ ಸಲಹೆ

CTD---0003
Published on

ಚಿತ್ರದುರ್ಗ: ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಯಿಂದ ಗಂಡು, ಹೆಣ್ಣೆಂಬ ಭೇದವಿಲ್ಲದೆ ಯಾರಾದರೂ ಮಾನಸಿಕ ರೋಗಕ್ಕೆ ಒಳಗಾಗುವ ಸಂಭವವಿದೆ ಎಂದು ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಹೇಳಿದರು. ನೆಹರು ನಗರದ ಅಂಗನವಾಡಿ‘ ಸಿ’ಕೇಂದ್ರದಲ್ಲಿ ಬುಧವಾರ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದಡಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಢನಂಬಿಕೆ ತೊರೆದು ಮಾನಸಿಕ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿದರು. ನೆಹರು ನಗರ ಆರೋಗ್ಯ ಕೇಂದ್ರದ ಡಾ. ಸೈಯದ್‌ಬಿಲಾಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹನುಮಂತಪ್ಪ, ಪ್ರವೀಣ್‌ಕುಮಾರ್, ರೇಖಾ, ಆಶಾ ಕಾರ್ಯಕರ್ತೆಯರಾದ ವಾಣಿ, ದ್ಯಾಮಕ್ಕ, ಅತ್ತರ್ ಫಾತಿಮಾ, ಅಂಗನವಾಡಿ ಕಾರ್ಯಕರ್ತೆಯರಾದ ಅನ್ನಪೂರ್ಣ, ಸಹಾಯಕಿ ನೇತ್ರಾವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net