ಮಾಜಿ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಕೋರ್ಟ್ಗೆ ಹಾಜರುಪಡಿಸಿದ ಕೇರಳ ಪೊಲೀಸ್

25 ckm 6
ಚಿಕ್ಕಮಗಳೂರಿನ ನ್ಯಾಯಾಲಯಕ್ಕೆ ಮಾಜಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ವಿಚಾರಣೆಗಾಗಿ ಕರೆತಂದ ಕೇರಳ ಪೊಲೀಸರು.
Published on

ಚಿಕ್ಕಮಗಳೂರು: ಮಾಜಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಕೇರಳ ಪೊಲೀಸರು ಚಿಕ್ಕಮಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿ ಕೋರ್ಟ್ ವಿಚಾರಣೆ ಬಳಿಕ ಮರಳಿ ತಮ್ಮ ವಶಕ್ಕೆ ಪಡೆದರು.

ನಕ್ಸಲ್ ಹೋರಾಟದ ಹಾದಿಯಲ್ಲಿ ಬಿ.ಜಿ.ಕೃಷ್ಣಮೂರ್ತಿ ಮೇಲೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ವಿಚಾರಣೆ ಸಂಬAಧ ಕೇರಳ ಪೊಲೀಸರು ಚಿಕ್ಕಮಗಳೂರು ನ್ಯಾಯಾಲಯದ ಮುಂದೆ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಹಾಜರುಪಡಿಸಿದರು.

ಬಿ.ಜಿ.ಕೃಷ್ಣಮೂರ್ತಿ ಮೇಲೆ ಒಟ್ಟು ೬೬ ಪ್ರಕರಣಗಳು ದಾಖಲಾಗಿವೆ. ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆ ನಡೆಸಿದ ಕೋರ್ಟ್ ಜುಲೈ ೨೧ಕ್ಕೆ ವಿಚಾರಣೆ ಮುಂದೂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ಆದ ಬಳಿಕ ಸುಮಾರು ಒಂದೂವರೆ ದಶಕಗಳ ಕಾಲ ಬಿ.ಜಿ.ಕೃಷ್ಣಮೂರ್ತಿ ನಕ್ಸಲ್ ನಾಯಕತ್ವ ವಹಿಸಿಕೊಂಡಿದ್ದರು.

೨೦೧೪ರ ಬಳಿಕ ನಿರಂತರ ಕಾಂಬಿAಗ್, ಮಲೆನಾಡಿಗರ ಬೆಂಬಲ ಕಡಿಮೆಯಾದ ಹಿನ್ನೆಲೆ ಬಿ.ಜಿ.ಕೃಷ್ಣಮೂರ್ತಿ ಸೇರಿ ಹಲವು ನಕ್ಸಲರು ಕೇರಳತ್ತ ಮುಖ ಮಾಡಿದ್ದರು. ಕಳೆದ ವರ್ಷ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿ ಬಿ.ಜಿ.ಕೃಷ್ಣಮೂರ್ತಿ ಪೊಲೀಸರಿಗೆ ಶರಣಾಗಿದ್ದರು. ಅವರು ಶರಣಾದ ಬಳಿಕ ಸುಮಾರು ೮ ಜನ ನಕ್ಸಲರು ಕರ್ನಾಟಕದಲ್ಲಿ ಶರಣಾಗತಿಯಾಗಿದ್ದರು. ೭ ಜನ ಸಿಎಂ ಮುಂದೆ ಶರಣಾಗಿದ್ದರೆ, ಓರ್ವ ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿದ್ದನು. ಬುಧವಾರ ವಿಚಾರಣೆ ಮುಗಿದ ಬಳಿಕ ಕೇರಳ ಪೊಲೀಸರು ಬಿ.ಜಿ.ಕೃಷ್ಣಮೂರ್ತಿಯನ್ನ ಮತ್ತೆ ತಮ್ಮ ವಶಕ್ಕೆ ಪಡೆದು ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net