ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲಿ

mlp 25-3 sweta
ಮಹಾಲಿಂಗಪುರದ ಸೌಜನ್ಯ ಕೈಮಗ್ಗ ನೇಕಾರರ ಸಹಕಾರ ಸಂಘದಲ್ಲಿ ನಡೆದ ಕೈಮಗ್ಗ ನೇಕಾರರ ತರಬೇತಿ ಕಾರ್ಯಕ್ರಮವನ್ನು ಜಮಖಂಡಿ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಉದ್ಘಾಟಿಸಿದರು. ಜಿ.ಎಸ್. ಗೊಂಬಿ, ತುಳಸಿರಾಮನ್ ಇದ್ದರು.
Published on

ಮಹಾಲಿಂಗಪುರ: ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಸಾಗಿಸಬೇಕೆಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ಬೆಂಗಳೂರಿನ ಜವಳಿ ಸಚಿವಾಲಯ ಹಾಗೂ ನೇಕಾರರ ಸೇವಾ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಸ್ಥಳೀಯ ಸೌಜನ್ಯ ಕೈಮಗ್ಗ ನೇಕಾರರ, ಉತ್ಪಾದಕರ, ಮಾರಾಟಗಾರರ ಸಹಕಾರ ಸಂಘದಲ್ಲಿ ಸಮರ್ಥ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ಕೈಮಗ್ಗ ನೇಕಾರರ (ಚೌಕಟ್ಟಿನ ಮಗ್ಗ) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಸಂಸ್ಕೃತಿಯುಳ್ಳ ಕೈಮಗ್ಗ ನೇಯ್ಗೆ ನಮ್ಮ ದೇಶದ ಹೆಮ್ಮೆ. ಮಹಿಳೆಯರು ತರಬೇತಿ ನಂತರ ಸ್ವಸಹಾಯ ಸಂಘ ರಚಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯ ಪಡೆದುಕೊಂಡು ಕೈಮಗ್ಗ ಆರಂಭಿಸಿ ತಮ್ಮ ಆರ್ಥಿಕಮಟ್ಟ ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ನೇಕಾರರಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಬೆಂಗಳೂರಿನ ನೇಕಾರ ಸೇವಾ ಕೆಂದ್ರದ ಅಧಿಕಾರಿ ತುಳಸಿರಾಮನ್ ಮಾತನಾಡಿದರು.

ಸೌಜನ್ಯ ಕೈಮಗ್ಗ ನೇಕಾರ ಸೇವಾ ಸಂಘದ ಅಧ್ಯಕ್ಷ ಜಿ.ಎಸ್. ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೇಕಾರ ಧುರೀಣರಾದ ಶಕುಂತಲಾ ಗೊಂಬಿ, ರಾಜೇಂದ್ರ ಮಿರ್ಜಿ, ಅಮರ ಬಂತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net