ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ

donkey marriage
ಮಳೆಗಾಗಿ ಪ್ರಾರ್ಥಿಸಿ ಹೂವಿನಹಡಗಲಿ ತಾಲೂಕಿನ ಇಟ್ಟಿಗಿಯಲ್ಲಿ ಕತ್ತೆಗಳಿಗೆ ಮದುವೆ ಮಾಡಲಾಯಿತು. ಗ್ರಾಮಸ್ಥರಾದ ಕೂಡ್ಲಿಗಿ ಬಸಣ್ಣ, ಅಂಜಿನಪ್ಪ, ಹಾಲೇಶ್ ಬಳೆಗಾರ, ವೀರಭದ್ರಪ್ಪ, ಮಾದೂರು ರಾಜಪ್ಪ, ಸಿ.ಕೊಟ್ರೇಶ್, ಕಲ್ಲಪ್ಪ, ಟಿ.ರಾಜಪ್ಪ ಇತರರಿದ್ದರು.
Published on

ಹೂವಿನಹಡಗಲಿ: ತಾಲೂಕಿನ ಇಟ್ಟಿಗಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಭಾನುವಾರ ಕತ್ತೆಗಳಿಗೆ ಮದುವೆ ಮಾಡಿದರು.

ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಕತ್ತೆಗಳಿಗೆ ಸ್ನಾನ ಮಾಡಿಸಿ, ಅರಿಶಿಣ ಹಚ್ಚಿ, ಬಾಸಿಂಗ ಕಟ್ಟಿ ಸಂಪ್ರದಾಯದಂತೆ ಮಾಂಗಲ್ಯ ಕಟ್ಟಿಸಿ ಅಕ್ಷತೆ ಹಾಕಿ ಆರತಿ ಬೆಳಗಿದರು. ನಂತರ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.

ಇದನ್ನೂ ಓದಿ:http://ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ
ರೈತರು ಮುಂಗಾರು ನಿರೀಕ್ಷೆಯಲ್ಲಿ ತೋಟ ಮತ್ತು ಜಮೀನುಗಳಲ್ಲಿ ಬಿತ್ತನೆಗಾಗಿ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿಟ್ಟಿದ್ದಾರೆ. ಆದರೆ, ಜುಲೈ ಆರಂಭವಾಗಿ 15 ದಿನ ಕಳೆದರೂ ಮಳೆ ಬಂದಿಲ್ಲ. ಹೀಗಾಗಿ ಸಮೃದ್ಧ ಮಳೆಗಾಗಿ ಸಂಪ್ರದಾಯದಂತೆ ಕತ್ತೆಗಳಿಗೆ ಮದುವೆ ಮಾಡಿ ಪ್ರಾರ್ಥಿಸಲಾಗಿದೆ ಎಂದು ಗ್ರಾಮದ ರೈತ ಮಲ್ಲಪ್ಪ ತಿಳಿಸಿದರು. ಗ್ರಾಮಸ್ಥರಾದ ಮಾದೂರು ರಾಜಪ್ಪ, ಸಿ.ಕೊಟ್ರೇಶ್, ಕಲ್ಲಪ್ಪ, ಟಿ.ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net