ಜಾನಪದ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ

15mul1 SANMAN
Published on

ಮುಳಗುಂದ: ಜಾನಪದ ಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಉದ್ಯಮಿ ನಾಗರಾಜ ಕಮಾಜಿ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೀರಗಾಸೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೀರಭದ್ರಪ್ಪ ಹರ್ತಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗುರುಶಾಂತ ಮಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಜನಪದ ವಿವಿಧ ಕಲೆಗಳಾದ ಹಂತಿ ಪದ, ಹಾಮೋನಿಯಂ, ತಬಲಾ, ಮೃದಂಗ, ಕೋಲಾಟ, ದೊಡ್ಡಾಟ, ಸಣ್ಣಾಟ, ಗೀಗಿ ಪದ, ನಾಟಕ, ಭಜನೆ, ಡೊಳ್ಳು, ಅನೇಕ ಜನಪದ ಕಲೆಗಳು ಇಂದಿನ ಆಧುನಿಕ ಟಿವಿ, ಸಿನಿಮಾಗಳ ಭರಾಟೆಯಲ್ಲಿ ನಶಿಸುವ ಹಂತದಲಿವೆ. ಇಂತಹ ಕಲೆ ಹಾಗೂ ಕಲಾವಿದರನ್ನು ಪ್ರೊತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಗುರಣ್ಣಾ ಹೊಂಬಳ, ಎಸ್.ಎಸ್. ಹಿರೇಮಠ, ಎಂ.ಆರ್. ತಡೆದಮಠ, ನಾಗಪ್ಪ ಮಳ್ಳಿ, ಬಸವಣ್ಣೆಪ್ಪ ಜಂಗೇರಿ, ಮಹಾಲಿಂಗಯ್ಯ ತಡೆದಮಠ, ಶಿವಪ್ಪ ಶಂಕಿನ, ಶಿವಪ್ಪ ಕುಂಚೂರ, ಈರಣ್ಣ ನಾಗರಹಳ್ಳಿ, ಮಲ್ಲೇಶ ಹರ್ತಿ, ಶೇಖಪ್ಪ ಹರ್ತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net