ಮನಸ್ಸಿನ ಶುದ್ಧಿಗಾಗಿ ಪ್ರವಚನ ಆಲಿಸಿ

bhalki math meeting
Published on

ಭಾಲ್ಕಿ: ನಿತ್ಯದ ಸಂಸಾರಿಕ ಜಂಜಾಟದಲ್ಲಿ ಕಲ್ಮಶಗೊಂಡಿರುವ ಮನಸ್ಸನ್ನು ಪರಿಶುದ್ಧಗೊಳಿಸುವ ಶಕ್ತಿ ಇರುವುದು ಪ್ರವಚನಕ್ಕೆ. ಹಿಗಾಗಿ ಶರಣರ, ಮಹಾತ್ಮರ ಪ್ರವಚನವನ್ನು ನಿತ್ಯ ಆಲಿಸಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಶುಕ್ರವಾರ ಪ್ರವಚನ ಹಾಗೂ ಸಾಮೂಹಿಕ ವಚನ ಪಾರಾಯಣ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರವಚನ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ ಕಳೆಯುತ್ತದೆ. ಪ್ರೀತಿಯ ನೀರು ನಮ್ಮ ಹೃದಯದಲ್ಲಿ ಉಕ್ಕಿ ಬರುತ್ತದೆ. ಬಸವಣ್ಣನವರು ಪ್ರೀತಿಯಿಂದಲೇ ಕಲ್ಯಾಣ ರಾಜ್ಯ ಕಟ್ಟಿದರು ಎಂದರು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ, ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ರೇಖಾ ಶಿವರಾಜ ಜ್ಯೋತೆಪ್ಪ, ಕಸಾಪ ತಾಲೂಕು ಘಟಕ ಅಧ್ಯಕ್ಷ ನಾಗಭೂಷಣ ಮಾಮಡಿ, ಪ್ರಮುಖರಾದ ಮಲ್ಲಮ್ಮ ನಾಗನಕೇರೆ, ಪಾರ್ವತಿ ಡೋಣಗಾಪೂರೆ, ಸುನೀತಾ ಮಮ್ಮಾ, ಸಂಗಮೇಶ ವಾಲೆ, ಮಲ್ಲಿಕಾರ್ಜುನ ಪಾವಡಶೆಟ್ಟಿ, ಜೈಹಿಂದ ಕುಂಬಾರ, ಸಿದ್ದಯ್ಯ ಕಾವಡಿಮಠ, ದೀಪಕ್ ಠಮಕೆ ಇತರರಿದ್ದರು.

ಪ್ರವಚನಕ್ಕೆ ಚಾಲನೆ ೧೦ರಂದು: ವಚನ ಜಾತ್ರೆ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಸ್ಮರಣೋತ್ಸವ ನಿಮಿತ್ತ ಏ.೧೦ರಿಂದ ೨೧ ರವರೆಗೆ ಪ್ರತಿದಿನ ಸಂಜೆ ೫ ರವರೆಗೆ ಪಟ್ಟಣದ ಚನ್ನಬಸವಾಶ್ರಮದಲ್ಲಿ ಪ್ರವಚನ ಆಯೋಜಿಸಲಾಗಿದೆ. ಶ್ರೀ ಸಿದ್ದಬಸವ ದೇವರು ಶರಣರು ಕಂಡ ಬಸವಣ್ಣ ವಿಷಯ ಮೇಲೆ ಪ್ರವಚನ ನೀಡಲಿದ್ದಾರೆ. ಏ.೧೫ರಿಂದ ೨೧ ರವರೆಗೆ ಬೆಳಗ್ಗೆ ೬ಕ್ಕೆ ಸಾಮೂಹಿಕ ವಚನ ಪಾರಾಯಣ ಜರುಗಲಿದೆ ಎಂದು ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net