

ಹೂವಿನಹಿಪ್ಪರಗಿ: ವಿದ್ಯಾರ್ಥಿಗಳು ಕ್ರೀಯಾಶೀಲರಾಗಿರಬೇಕಾದರೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ. ಜತೆಗೆ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹೊರಹೊಮ್ಮಲು ಸಹಕಾರಿ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಸ್ಥಳೀಯ ಆಶೀರ್ವಾದ ಪಬ್ಲಿಕ್ ಶಾಲೆಯಲ್ಲಿ ಪ್ರಸಕ್ತ ಸಾಲಿನ ಹೂವಿನಹಿಪ್ಪರಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಜತೆಯಲ್ಲಿ ಅವರಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಇಂದಿನ ವಿದ್ಯಾರ್ಥಿಗಳು ಹಲವು ಪ್ರಕಾರಗಳ ಪ್ರತಿಭಾವಂತರಗಿದ್ದು, ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶ. ಪಾಲಕರು ಮಕ್ಕಳಿಗೆ ಹೆಚ್ಚು ಅಂಕ ಗಳಿಸಲು ಒತ್ತಡ ಹೇರುತ್ತಾರೆ. ಆದರೆ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡುವುದಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಾಗ ಮಗುವಿನ ಸರ್ವತೋಮುಖ ಬೆಳವಣಿಗೆ ಆಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರತಿಭೆಯನ್ನು ಕೇವಲ ಪಠ್ಯ ಪುಸ್ತಕಗಳಿಂದ ಹಾಗೂ ಅಂಕಗಳಿಂದ ನೋಡದೇ ಪಠ್ಯೇತರ ಚಟುವಟಕೆಗಳನ್ನು ಹಮ್ಮಿಕೊಳ್ಳುವುದರಿಂದ ಪ್ರತಿಭಾನ್ವಿತರಿಗೆ ಅವಕಾಶ ಸಿಗಲಿದೆ. ಇದೀಗ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ತುಂಬಾ ಅವಕಾಶಗಳಿದ್ದು, ಅದನ್ನು ಪ್ರತಿಯೊಂದು ಮಗುವೂ ಬಳಸಿಕೊಂಡು ಬೆಳೆಯಬೇಕು ಎಂದರು.
ಬಿಇಒ ವಸಂತ ರಾಠೋಡ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳ ಪ್ರತಿಭೆ ಗುರುತಿಸಿ ಹೊರತರಬೇಕು. ಪ್ರತಿಭೆ ಯಾರ ಸ್ವತ್ತಲ್ಲ. ಸಾಧನೆಯ ಶಿಖರವೇರಬೇಕೆಂದರೆ ಛಲ, ನಿರಂತರ ಶ್ರಮವಿರಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಿವುಬಾಯಿ ಮಾದರ, ಗುರುನಗೌಡ ಪಾಟೀಲ, ಬಸವರಾಜ ತಿಳಿಗೋಳ, ಅಪ್ಪುಗೌಡ ಪಾಟೀಲ, ಮುರಗೇಶ ತಾಳಿಕೋಟಿ, ಮಲ್ಲಿಕಾರ್ಜುನ ರಾಜನಾಳ, ಶಿಕ್ಷಣ ಸಂಯೋಜಕ ವಿ.ಸಿ. ಜುಳಜುಳೆ, ಬಿಆರ್ಪಿ ಎಸ್.ಬಿ. ಬಾಗೇವಾಡಿ, ಸಿಆರ್ಪಿ ಸುಮಿತ್ರಾ ತೋಟದ, ಬಿ.ಟಿ. ದೊಡಮನಿ, ಆನಂದ ಪತ್ತಾರ, ಅಂಬರೇಶ ನಾಡಗೌಡ, ಆರ್.ಜಿ. ವಪ್ಪಾರಿ, ವಿದ್ಯಾಶ್ರೀ ಸಜ್ಜನ, ಎನ್.ಐ. ಹುಲ್ಲೂರ, ಆರ್.ಜಿ. ವಪ್ಪಾರಿ, ಬಿ.ಎಲ್. ಪವಾರ, ಪಿ.ವೈ. ರತ್ನಾಕರ, ಸಿದ್ದರಾಮಪ್ಪ ಗಬಸಾವಳಗಿ ಇತರರಿದ್ದರು.