ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಮತ್ತಿಬ್ಬರ ಬಂಧನ

IMG-20201112-WA0053
Published on

ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಬಂಬಳ ಅಗಸಿಯ ನಿವಾಸಿ ಹಣಮಂತ ಸೋಮಪ್ಪ ಮಳೆಪ್ಪನವರ ಊರ್ಫ್ ಪೂಜಾರಿ (23) ಹಾಗೂ ಈರಣ್ಣ ರಾಮ ಬಡಿಗೇರ (20) ಬಂಧಿತ ಆರೋಪಿಗಳು. ಇವರಿಂದ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟು 19 ಜನರನ್ನು ದಸ್ತಗಿರಿ ಮಾಡಲಾಗಿದೆ.

ನ. 2 ರಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಲಾಗಿದ್ದು ತನಿಖೆ ಚುರುಕೊಂಡಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಸಿಪಿಐ ಎಂ.ಕೆ. ಧ್ಯಾಮಣ್ಣವರ, ರವೀಂದ್ರ ನಾಯ್ಕೋಡಿ, ಸಿ.ಬಿ. ಬಾಗೇವಾಡಿ, ಸುರೇಶ ಬಂಡೆಗುಂಬಳ, ಸುನೀಲ ಆರ್. ಕಾಂಬಳೆ, ಬಸವರಾಜ ಮೂಕರ್ತಿಹಾಳ, ಸೋಮಶೇಖರ ಜುಟ್ಟಲ ಕಾರ್ಯ ಶ್ಲಾಘನೀಯ ಎಂದು ಎಸ್‌ಪಿ ಅನುಪಮ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net