ಬೀರುವಿನಲ್ಲಿಟ್ಟಿದ್ದ 8.48 ಲಕ್ಷ ರೂ. ನಗದು ಕಳವು

Published on

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದ ಮೋಹನ್ ನಾಗ್ ಎಂಬುವರ ಮನೆಯ ಹಿಂಬಾಗಿಲನ್ನು ತೆಗೆದು ಒಳನುಗ್ಗಿರುವ ಖದೀಮರು ಬೀರುವಿನಲಿಟ್ಟಿದ್ದ 8.48 ಲಕ್ಷ ರೂ. ನಗದನ್ನು ಕದ್ದೂಯ್ದಿದ್ದಾರೆ.


ಆ.15 ರ ಮಂಗಳವಾರ ಸಂಜೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ನಾಗಮಂಗಲ ತಾಲೂಕಿನ ಮುಳಕಟ್ಟಮ್ಮ ದೇವಸ್ಥಾನಕ್ಕೆ ಮೋಹನ್ ನಾಗ್ ಕುಟುಂಬ ತೆರಳಿದೆ.

ದೇಗುಲದಲ್ಲಿ ಪೂಜಾ ಕಾರ್ಯ ಮುಗಿಸಿ ಅಂದೇ ರಾತ್ರಿ 11.30ರ ಸುಮರಿಗೆ ಮನೆಗೆ ವಾಪಸ್ಸಾದಾಗ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಮನೆಯ ಹಿಂಬಾಗಿಲನ್ನು ಕಳ್ಳರು ತೆಗೆದು ಬೆಡ್‌ರೂಮ್ನಲ್ಲಿ ಬೀರುವಿನ ಒಳಗೆ ಇಟ್ಟಿದ್ದ 8.48 ಲಕ್ಷ ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮೋಹನ್ ನಾಗ್ ತಿಳಿಸಿದ್ದಾರೆ. ಹಿರೀಸಾವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net